See also 2knot  3knot
1knot ನಾಟ್‍
ನಾಮವಾಚಕ
  1. ಗಂಟು; ಗ್ರಂಥಿ; ಕುಣಿಕೆ.
  2. (ಉಡುಪಿಗೆ ಅಲಂಕಾರವಾಗಿ ಕಟ್ಟಿದ ರಿಬ್ಬನ್ನು ಮೊದಲಾದವುಗಳ) ಕುಚ್ಚು; ಕಟ್ಟು; ಗೊಂಡೆ.
  3. ಗಂಟು; ಗಂಟುಕಟ್ಟುವ ಒಂದು ನಿರ್ದಿಷ್ಟ ವಿಧಾನ, ರೀತಿ.
  4. (ನೌಕಾಯಾನ) ನಾಟ್‍:
    1. ಹಡಗಿನ ವೇಗವನ್ನು ಅಳೆಯಲು, ಉದ್ದವಾದ ಹಗ್ಗದಲ್ಲಿ ಹಾಕಿರುವ ಗಂಟುಗಳಿಂದ ಗುರುತಿಸಿರುವ ವಿಭಾಗ.
    2. (ಒಂದು ಗಂಟೆಗೆ ಒಂದು ನಾವಿಕ ಮೈಲಿಗೆ ಸಮನಾದ) ನೌಕೆಯ ಯಾ ವಿಮಾನದ ವೇಗದ ಮೂಲಮಾನ (ಸುಮಾರು 1.852 ಕಿಲೋಮೀಟರು; ಬ್ರಿಟನ್ನಿನಲ್ಲಿ 6080 ಅಡಿಗಳು).
    3. (ಸಡಿಲವಾಗಿ) ನೌಕಾ ಮೈಲಿ; ನಾವಿಕ ಮೈಲಿ.
  5. ಗಂಟು; ಸಿಕ್ಕು; ತೊಡಕು; ಕಷ್ಟ; ಸಮಸ್ಯೆ.
  6. (ಯಾವುದೇ ಸಮಸ್ಯೆ, ಕಥಾವಸ್ತು, ಮೊದಲಾದವುಗಳ) ಕೇಂದ್ರ; ಗರ್ಭ; ಮರ್ಮಸ್ಥಾನ.
  7. ಬಂಧನ; ಯಾವುದೇ ಸಂಯೋಗ, ಐಕ್ಯತೆಯನ್ನು ಯಾ (ಮುಖ್ಯವಾಗಿ ವೈವಾಹಿಕ) ಸಂಬಂಧವನ್ನು ರೂಪಿಸುವಂಥದು ಯಾ ಕಾಪಾಡುವಂಥದು.
  8. (ಪ್ರಾಣಿಯ ದೇಹದಲ್ಲಿ ಇರುವ ಯಾ ಆಗುವ) ಗಂಟು; ಗಂತಿ; ಗ್ರಂಥಿ; ಗಳಲೆ.
  9. (ಸಸ್ಯದ ಕಾಂಡ, ಕೊಂಬೆ ಯಾ ಬೇರಿನಲ್ಲಿ ಬೆಳೆದುಕೊಳ್ಳುವ, ಸಸ್ಯದೇಹಕ್ಕೆ ಹೊರತಾದ)
    1. ಗಂತಿ; ಗಡ್ಡೆ; ಗಂಟು; ಗಳಲೆ.
    2. (ಈ ಗಂಟಿನಿಂದ ಕೂಡಿದ ಭಾಗದಿಂದ ಮಾಡಿದ ಹಲಗೆಯ ಅಡ್ಡ ಎಳೆಯಲ್ಲಿ ಕಾಣುವ) ಉಬ್ಬು; ಗಂಟು; ಕೆಚ್ಚು ಗಂಟು.
  10. (ಸಸ್ಯದ ಕಾಂಡದಲ್ಲಿನ) ಗೆಣ್ಣು; ಪರ್ವ; ಎಲೆ ಹೊರಡುವ ಸ್ಥಳ.
  11. (ವ್ಯಕ್ತಿಗಳ ಯಾ ವಸ್ತುಗಳ) ಗುಂಪು; ತಂಡ; ಹಿಂಡು; ಸಮೂಹ.
  12. (ಬ್ರಿಟಿಷ್‍ ಪ್ರಯೋಗ) ಹೊರೆಕುಣಿಕೆ; ಹೇರು ಕುಣಿಕೆ; ಹೊರೆಗಳನ್ನು ಹೊರಲು ಎರಡು ಹೆಗಲುಗಳ ಮೇಲೂ ಬರುವಂಥ ಸಿಂಬಿ ಯಾ ಮೆತ್ತೆ ಮತ್ತು ಹಣೆಗೆ ತಗುಲಿಸಿಕೊಳ್ಳುವ ಪಟ್ಟಿ ಮೊದಲಾದ ಸಾಧನ.
ಪದಗುಚ್ಛ
  1. wedding knot ಮದುವೆಗಂಟು; ವಿವಾಹ ಬಂಧನ.
  2. porter’s knot (ಬ್ರಿಟಿಷ್‍ ಪ್ರಯೋಗ) = 1knot(12).
ನುಡಿಗಟ್ಟು
  1. at the rate of knots (ಆಡುಮಾತು) ಬಹಳ ವೇಗವಾಗಿ.
  2. tie in knots (ಆಡುಮಾತು) (ವ್ಯಕ್ತಿಯನ್ನು) ಪೂರ್ತಿ ಕಕ್ಕಾವಿಕ್ಕಿಗೊಳಿಸು; ಪೂರ್ಣವಾಗಿ – ದಿಗ್ಭ್ರಮೆಗೊಳಿಸು, ತಬ್ಬಿಬ್ಬು ಮಾಡು.
See also 1knot  3knot
2knot ನಾಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ knotted, ವರ್ತಮಾನ ಕೃದಂತ knotting).
ಸಕರ್ಮಕ ಕ್ರಿಯಾಪದ
  1. (ದಾರ ಮೊದಲಾದವನ್ನು) ಗಂಟು ಹಾಕು.
  2. (ಅಂಚುದಾರವನ್ನು ಸೇರಿಸಿ) ಕಟ್ಟು; ಗಂಟುಹಾಕು.
  3. (ಹುಬ್ಬನ್ನು) ಗಂಟು ಹಾಕು.
  4. ಒತ್ತಾಗಿ – ಹೊಸೆ, ಹೆಣೆ.
  5. ತೊಡಕು ಮಾಡು; ಸಿಕ್ಕಾಗಿಸು; ಗೋಜುಲುಗೊಳಿಸು; ಜಟಿಲಗೊಳಿಸು.
ಅಕರ್ಮಕ ಕ್ರಿಯಾಪದ
  1. (ಅಂಚಿನ ದಾರಗಳನ್ನು ಸೇರಿಸಿ ಗಂಟು ಹಾಕಿ) ಅಂಚುಕಟ್ಟು.
  2. ಒತ್ತಾಗಿ – ಹೆಣೆದುಕೊ, ಹೊಸೆದುಕೊ.
ನುಡಿಗಟ್ಟು

get knotted! (ಅಶಿಷ್ಟ) ಹಾಳಾಗಿ ಹೋಗ! ಎಕ್ಕ ಹುಟ್ಟಿಹೋಗ! (ಅಪನಂಬಿಕೆ, ಕಿರಿಕಿರಿ, ಮೊದಲಾದವುಗಳನ್ನು ವ್ಯಕ್ತಪಡಿಸುವಾಗ ಹೇಳುವ ಮಾತು).

See also 1knot  2knot
3knot ನಾಟ್‍
ನಾಮವಾಚಕ

ಗಂಟುಹಕ್ಕಿ; ನೀರಿನಲ್ಲಿ ಹಾಯುವ, ಕ್ಯಾಲಿಡ್ರಿಸ್‍ ಕ್ಯಾನ್ಯುಟಸ್‍ ಕುಲದ ಸಣ್ಣ ಹಕ್ಕಿ.