See also 2knot  3knot
1knot ನಾಟ್‍
ನಾಮವಾಚಕ
  1. ಗಂಟು; ಗ್ರಂಥಿ; ಕುಣಿಕೆ.
  2. (ಉಡುಪಿಗೆ ಅಲಂಕಾರವಾಗಿ ಕಟ್ಟಿದ ರಿಬ್ಬನ್ನು ಮೊದಲಾದವುಗಳ) ಕುಚ್ಚು; ಕಟ್ಟು; ಗೊಂಡೆ.
  3. ಗಂಟು; ಗಂಟುಕಟ್ಟುವ ಒಂದು ನಿರ್ದಿಷ್ಟ ವಿಧಾನ, ರೀತಿ.
  4. (ನೌಕಾಯಾನ) ನಾಟ್‍:
    1. ಹಡಗಿನ ವೇಗವನ್ನು ಅಳೆಯಲು, ಉದ್ದವಾದ ಹಗ್ಗದಲ್ಲಿ ಹಾಕಿರುವ ಗಂಟುಗಳಿಂದ ಗುರುತಿಸಿರುವ ವಿಭಾಗ.
    2. (ಒಂದು ಗಂಟೆಗೆ ಒಂದು ನಾವಿಕ ಮೈಲಿಗೆ ಸಮನಾದ) ನೌಕೆಯ ಯಾ ವಿಮಾನದ ವೇಗದ ಮೂಲಮಾನ (ಸುಮಾರು 1.852 ಕಿಲೋಮೀಟರು; ಬ್ರಿಟನ್ನಿನಲ್ಲಿ 6080 ಅಡಿಗಳು).
    3. (ಸಡಿಲವಾಗಿ) ನೌಕಾ ಮೈಲಿ; ನಾವಿಕ ಮೈಲಿ.
  5. ಗಂಟು; ಸಿಕ್ಕು; ತೊಡಕು; ಕಷ್ಟ; ಸಮಸ್ಯೆ.
  6. (ಯಾವುದೇ ಸಮಸ್ಯೆ, ಕಥಾವಸ್ತು, ಮೊದಲಾದವುಗಳ) ಕೇಂದ್ರ; ಗರ್ಭ; ಮರ್ಮಸ್ಥಾನ.
  7. ಬಂಧನ; ಯಾವುದೇ ಸಂಯೋಗ, ಐಕ್ಯತೆಯನ್ನು ಯಾ (ಮುಖ್ಯವಾಗಿ ವೈವಾಹಿಕ) ಸಂಬಂಧವನ್ನು ರೂಪಿಸುವಂಥದು ಯಾ ಕಾಪಾಡುವಂಥದು.
  8. (ಪ್ರಾಣಿಯ ದೇಹದಲ್ಲಿ ಇರುವ ಯಾ ಆಗುವ) ಗಂಟು; ಗಂತಿ; ಗ್ರಂಥಿ; ಗಳಲೆ.
  9. (ಸಸ್ಯದ ಕಾಂಡ, ಕೊಂಬೆ ಯಾ ಬೇರಿನಲ್ಲಿ ಬೆಳೆದುಕೊಳ್ಳುವ, ಸಸ್ಯದೇಹಕ್ಕೆ ಹೊರತಾದ)
    1. ಗಂತಿ; ಗಡ್ಡೆ; ಗಂಟು; ಗಳಲೆ.
    2. (ಈ ಗಂಟಿನಿಂದ ಕೂಡಿದ ಭಾಗದಿಂದ ಮಾಡಿದ ಹಲಗೆಯ ಅಡ್ಡ ಎಳೆಯಲ್ಲಿ ಕಾಣುವ) ಉಬ್ಬು; ಗಂಟು; ಕೆಚ್ಚು ಗಂಟು.
  10. (ಸಸ್ಯದ ಕಾಂಡದಲ್ಲಿನ) ಗೆಣ್ಣು; ಪರ್ವ; ಎಲೆ ಹೊರಡುವ ಸ್ಥಳ.
  11. (ವ್ಯಕ್ತಿಗಳ ಯಾ ವಸ್ತುಗಳ) ಗುಂಪು; ತಂಡ; ಹಿಂಡು; ಸಮೂಹ.
  12. (ಬ್ರಿಟಿಷ್‍ ಪ್ರಯೋಗ) ಹೊರೆಕುಣಿಕೆ; ಹೇರು ಕುಣಿಕೆ; ಹೊರೆಗಳನ್ನು ಹೊರಲು ಎರಡು ಹೆಗಲುಗಳ ಮೇಲೂ ಬರುವಂಥ ಸಿಂಬಿ ಯಾ ಮೆತ್ತೆ ಮತ್ತು ಹಣೆಗೆ ತಗುಲಿಸಿಕೊಳ್ಳುವ ಪಟ್ಟಿ ಮೊದಲಾದ ಸಾಧನ.
ಪದಗುಚ್ಛ
  1. wedding knot ಮದುವೆಗಂಟು; ವಿವಾಹ ಬಂಧನ.
  2. porter’s knot (ಬ್ರಿಟಿಷ್‍ ಪ್ರಯೋಗ) = 1knot(12).
ನುಡಿಗಟ್ಟು
  1. at the rate of knots (ಆಡುಮಾತು) ಬಹಳ ವೇಗವಾಗಿ.
  2. tie in knots (ಆಡುಮಾತು) (ವ್ಯಕ್ತಿಯನ್ನು) ಪೂರ್ತಿ ಕಕ್ಕಾವಿಕ್ಕಿಗೊಳಿಸು; ಪೂರ್ಣವಾಗಿ – ದಿಗ್ಭ್ರಮೆಗೊಳಿಸು, ತಬ್ಬಿಬ್ಬು ಮಾಡು.