See also 2knell
1knell ನೆಲ್‍
ನಾಮವಾಚಕ
  1. ಸಾವಿನ ಗಂಟೆ; ಮರಣ ಘಂಟಾನಾದ; ಒಬ್ಬನ ಮರಣಕಾಲದಲ್ಲಿ ಯಾ ಶವಸಂಸ್ಕಾರದಲ್ಲಿ, ನಿಧಾನವಾಗಿಯೂ ಗಂಭೀರವಾಗಿಯೂ ಬಾರಿಸುವ ಘಂಟಾ – ನಾದ, ರವ.
  2. (ರೂಪಕವಾಗಿ) ಅಪಶಕುನ; ಅಂತ್ಯದ ಘೋಷಣೆ; ಅವಸಾನದ ಪ್ರಕಟನೆ; ಅಪಾಯದ ಸೂಚನೆ; ಮರಣದ ಯಾ ವಿನಾಶದ ಸೂಚನೆ, ಶಕುನ ಎಂದು ಪರಿಗಣಿತವಾದ ಘೋಷಣೆ, ಘಟನೆ, ಮೊದಲಾದವು.
See also 1knell
2knell ನೆಲ್‍
ಸಕರ್ಮಕ ಕ್ರಿಯಾಪದ

(ಮರಣ ಘಂಟಾನಾದ ಮಾಡುವಂತೆ) ಸಾರು; ಘೋಷಿಸು.

ಅಕರ್ಮಕ ಕ್ರಿಯಾಪದ
  1. (ಘಂಟೆಯ ವಿಷಯದಲ್ಲಿ ಮರಣಕಾಲದಲ್ಲಿ ಯಾ ಶವಸಂಸ್ಕಾರದಲ್ಲಿ) ಬಾರಿಸು; ಮರಣ ಘಂಟಾನಾದ ಮಾಡು.
  2. ಗೋಳುದನಿಗರೆ; ರೋದನ ಧ್ವನಿಮಾಡು.
  3. (ರೂಪಕವಾಗಿ) ಅಶುಭಸೂಚಕವಾದ, ಅಮಂಗಳಕರವಾದ – ಸ್ವರ ಎತ್ತು, ದನಿತೆಗೆ.
ನುಡಿಗಟ್ಟು

ring the knell of ಮರಣಗಂಟೆ ಬಾರಿಸು; ಯಾವುದೇ ಒಂದರ ಅಂತ್ಯವನ್ನು ಯಾ ವಿನಾಶವನ್ನು ಘೋಷಿಸು, ಸಾರು.