See also 2kite
1kite ಕೈಟ್‍
ನಾಮವಾಚಕ
  1. ಗಾಳಿಪಟ; ಪತಂಗ. Figure: kite
  2. ಗಿಡುಗ, ಹದ್ದು ಯಾ ಗರುಡ.
  3. ಸುಲಿಗೆಕೋರ; ದುರಾಸೆಯಿಂದ ಸಿಕ್ಕಿದ್ದನ್ನೆಲ್ಲ ದೋಚಿಕೊಳ್ಳುವವನು.
  4. (ಪ್ರಾಚೀನ ಪ್ರಯೋಗ) ದಗಾಕೋರ; ವಂಚಕ; ಮೋಸಗಾರ.
  5. (ವಾಣಿಜ್ಯ ಅಶಿಷ್ಟ) = accommodation bill.
  6. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವಿಮಾನ; ಏರೋಪ್ಲೇನು.
  7. (ಬಹುವಚನದಲ್ಲಿ) ಕುಡಿಹಾಯಿಗಳು; ತುದಿಪಟಗಳು; ಮೆಲುಗಾಳಿಯಲ್ಲಿ ಮಾತ್ರವೇ ಹರಡುವ ಹಡಗಿನ ಅತ್ಯಂತ ಮೇಲಿನ ಹಾಯಿಪಟಗಳು.
  8. (ಅಶಿಷ್ಟ) ಖೋಟಾ ಯಾ ಮೋಸದ – ಚೆಕ್ಕು, ರಸೀತಿ, ಯಾ ಬಿಲ್ಲು.
  9. (ಅಶಿಷ್ಟ) ಅಕ್ರಮವಾದ, ಕಳ್ಳತನದ, ಯಾ ಮುಚ್ಚುಮರೆಯ ಕಾಗದ ಯಾ ಟಿಪ್ಪಣಿ.
  10. (ಜ್ಯಾಮಿತಿ) ಗಾಳಿಪಟ; ಯಾವ ಬಾಹುವನ್ನು ಪರಿಗಣಿಸಿದರೂ ಅದು ಒಂದು ಪಕ್ಕದ ಬಾಹುವಿಗೆ ಸಮವಾಗಿಯೂ ಇನ್ನೊಂದು ಪಕ್ಕದ ಬಾಹುವಿಗೆ ಅಸಮವಾಗಿಯೂ ಇರುವ, ಅದರಿಂದಾಗಿ ಒಂದು ವಿಕರ್ಣ ಕುರಿತಂತೆ ಸಮ್ಮಿತವಾಗಿರುವ ಚತುರ್ಭುಜ.
See also 1kite
2kite ಕೈಟ್‍
ಸಕರ್ಮಕ ಕ್ರಿಯಾಪದ
  1. (ಗಾಳಿಯ ಪಟದಂತೆ) ತುಂಬ ಎತ್ತರದಲ್ಲಿ ಹಾರಿಸು.
  2. (ವಾಣಿಜ್ಯ ಅಶಿಷ್ಟ) (ಹಣವನ್ನು) ನೆರವು ಹುಂಡಿಯಾಗಿ ಪರಿವರ್ತಿಸು.
  3. (ಅಶಿಷ್ಟ) ಖೋಟಾ ಚೆಕ್ಕುಗಳು, ಬಿಲ್ಲುಗಳು ಯಾ ರಸೀತಿಗಳನ್ನು ಸೃಷ್ಟಿಸು, ಪಾಸು ಮಾಡು.
  4. ಮೋಸದಿಂದ ಹಣ ಸಂಗ್ರಹಿಸು.
ಅಕರ್ಮಕ ಕ್ರಿಯಾಪದ
  1. ಹದ್ದಿನಂತೆ ಯಾ ಗಾಳಿಪಟದಂತೆ ಆಕಾಶದಲ್ಲಿ ಮೇಲೆ ಮೇಲೇರಿ ಹಾರು.
  2. (ಅಮೆರಿಕನ್‍ ಪ್ರಯೋಗ) (ಆಡುಮಾತು) ಬೇಗಬೇಗ – ಚಲಿಸು, ಓಡಾಡು, ಸರಿ.