See also 2kite
1kite ಕೈಟ್‍
ನಾಮವಾಚಕ
  1. ಗಾಳಿಪಟ; ಪತಂಗ. Figure: kite
  2. ಗಿಡುಗ, ಹದ್ದು ಯಾ ಗರುಡ.
  3. ಸುಲಿಗೆಕೋರ; ದುರಾಸೆಯಿಂದ ಸಿಕ್ಕಿದ್ದನ್ನೆಲ್ಲ ದೋಚಿಕೊಳ್ಳುವವನು.
  4. (ಪ್ರಾಚೀನ ಪ್ರಯೋಗ) ದಗಾಕೋರ; ವಂಚಕ; ಮೋಸಗಾರ.
  5. (ವಾಣಿಜ್ಯ ಅಶಿಷ್ಟ) = accommodation bill.
  6. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವಿಮಾನ; ಏರೋಪ್ಲೇನು.
  7. (ಬಹುವಚನದಲ್ಲಿ) ಕುಡಿಹಾಯಿಗಳು; ತುದಿಪಟಗಳು; ಮೆಲುಗಾಳಿಯಲ್ಲಿ ಮಾತ್ರವೇ ಹರಡುವ ಹಡಗಿನ ಅತ್ಯಂತ ಮೇಲಿನ ಹಾಯಿಪಟಗಳು.
  8. (ಅಶಿಷ್ಟ) ಖೋಟಾ ಯಾ ಮೋಸದ – ಚೆಕ್ಕು, ರಸೀತಿ, ಯಾ ಬಿಲ್ಲು.
  9. (ಅಶಿಷ್ಟ) ಅಕ್ರಮವಾದ, ಕಳ್ಳತನದ, ಯಾ ಮುಚ್ಚುಮರೆಯ ಕಾಗದ ಯಾ ಟಿಪ್ಪಣಿ.
  10. (ಜ್ಯಾಮಿತಿ) ಗಾಳಿಪಟ; ಯಾವ ಬಾಹುವನ್ನು ಪರಿಗಣಿಸಿದರೂ ಅದು ಒಂದು ಪಕ್ಕದ ಬಾಹುವಿಗೆ ಸಮವಾಗಿಯೂ ಇನ್ನೊಂದು ಪಕ್ಕದ ಬಾಹುವಿಗೆ ಅಸಮವಾಗಿಯೂ ಇರುವ, ಅದರಿಂದಾಗಿ ಒಂದು ವಿಕರ್ಣ ಕುರಿತಂತೆ ಸಮ್ಮಿತವಾಗಿರುವ ಚತುರ್ಭುಜ.