See also 2kill
1kill ಕಿಲ್‍
ಸಕರ್ಮಕ ಕ್ರಿಯಾಪದ
  1. ಕೊಲ್ಲು; ಕೊಂದು ಹಾಕು; ಸಾಯಿಸು; ಪ್ರಾಣ ತೆಗೆ; ಸಾವಿಗೆ, ಮರಣಕ್ಕೆ ಗುರಿ ಮಾಡು.
  2. (ರೋಗ, ದುಃಖ, ಆಘಾತ, ಮದ್ಯಪಾನ, ವಿಷಪಾನ, ಮೊದಲಾದವುಗಳ ವಿಷಯದಲ್ಲಿ) ಸಾಯಿಸು; ಸಾವನ್ನುಂಟುಮಾಡು; ಸಾವನ್ನು ತರು; ಸಾವಿಗೆ ಕಾರಣವಾಗು.
  3. (ಕಥೆ ಮೊದಲಾದವುಗಳಲ್ಲಿ, ಪಾತ್ರವನ್ನು) ಕೊಲ್ಲು; ಸಾಯಿಸು; ಸತ್ತಂತೆ ನಿರೂಪಿಸು: kill your villain in the last chapter ನಿನ್ನ ಖಳನಾಯಕನನ್ನು ಕೊನೆಯ ಅಧ್ಯಾಯದಲ್ಲಿ ಕೊಲ್ಲು.
  4. (ಗಿಡ, ರೋಗ, ಮೊದಲಾದವುಗಳ) ಸತ್ತ್ವನಾಶ ಮಾಡು; ಜೀವ ತೆಗೆ.
  5. (ಭಾವಗಳು ಮೊದಲಾದವನ್ನು) ಕೊನೆಗಾಣಿಸಿಬಿಡು; ಅಡಗಿಸಿ ಬಿಡು; ಅಳಿಯಿಸು; ಧ್ವಂಸ ಮಾಡು.
  6. (ಬಣ್ಣ ಮೊದಲಾದವನ್ನು, ವ್ಯತಿರಿಕ್ತವಾದ ಬಣ್ಣ ಮೊದಲಾದವುಗಳಿಂದ) ಕಳೆಗುಂದಿಸು; ನಿಸ್ತೇಜಗೊಳಿಸು; ವಿವರ್ಣಗೊಳಿಸು; ನಿಷ್ಪ್ರಭಾವಗೊಳಿಸು.
  7. (ಭವಿಷ್ಯತ್ತನ್ನು ಎದುರುನೋಡುತ್ತಾ, ಭಾವೀ ಘಟನೆಯನ್ನು ನಿರೀಕ್ಷಿಸುತ್ತಾ) ಹೊತ್ತು ಕಳೆ; ಕಾಲ ತಳ್ಳು; (ವ್ಯರ್ಥವಾಗಿ) ಸಮಯ ಪೋಲು ಮಾಡು.
  8. (ಭಾರಿ ಮೆಚ್ಚಿಗೆ, ಖುಷಿ, ವಿನೋದ, ಮೊದಲಾದವುಗಳಲ್ಲಿ ಒಬ್ಬನನ್ನು) ಮುಳುಗಿಸಿ ಬಿಡು; ಪರವಶಗೊಳಿಸು: dressed to kill ಪರವಶಗೊಳಿಸುವಂತೆ ಬೆಡಗಿನಿಂದ ಯಾ ಆಕರ್ಷಕವಾಗಿ ಸಿಂಗರಿಸಿಕೊಂಡ, ಅಲಂಕರಿಸಿಕೊಂಡ.
  9. (ಲಾನ್‍ ಟೆನಿಸ್‍) (ಹಿಂದಕ್ಕೆ ಕಳುಹಲಾಗದಂತೆ, ಚೆಂಡನ್ನು) ಬಾರಿಸು; ಹೊಡೆ.
  10. (ಹುಟ್‍ಬಾಲ್‍) (ಮುಂದಕ್ಕೆ ಚಲಿಸದಂತೆ ಚೆಂಡನ್ನು) ತಡೆದು ಬಿಡು; ನಿಲ್ಲಿಸಿಬಿಡು; ನಿಶ್ಚಲಗೊಳಿಸು.
  11. (ಪಾರ್ಲಿಮೆಂಟಿನಲ್ಲಿ, ಮಸೂದೆಯನ್ನು) ಹತ ಮಾಡಿಬಿಡು; ಕೊಂದು ಹಾಕು; ನಿಪಾತ ಮಾಡಿಬಿಡು; ಪೂರ್ತಿಯಾಗಿ ಸೋಲಿಸಿಬಿಡು; ತಲೆ ಎತ್ತದಂತೆ ಮಾಡಿಬಿಡು; ಹುಟ್ಟಡಗಿಸಿಬಿಡು.
  12. (ಹುಸಿ ದಯೆಯಿಂದ, ದಯಾ ಭ್ರಾಂತಿಯಿಂದ) ಕೆಡಕುಂಟುಮಾಡು; ಹಾನಿಯುಂಟುಮಾಡು.
  13. ಪ್ರಾಣಿಗಳನ್ನು ಕೊಂದು ಮಾಂಸ ಪಡೆ.
  14. (ಆಡುಮಾತು) ತೀವ್ರ ಯಾತನೆ ಕೊಡು; ಬಹಳ ನೋವುಂಟುಮಾಡು: my feet are killing me ನನ್ನ ಕಾಲಡಿಗಳು ನನ್ನನ್ನು ಕೊಲ್ಲುತ್ತಿವೆ, ನನಗೆ ಸಹಿಸಲಾರದ ನೋವು ಕೊಡುತ್ತಿವೆ.
  15. (ಆಡುಮಾತು) (ತಿಂಡಿ ತೀರ್ಥಗಳ ವಿಷಯದಲ್ಲಿ) ಧ್ವಂಸ ಮಾಡಿಬಿಡು; (ತಿಂದು, ಕುಡಿದು) ಖಾಲಿ ಮಾಡಿಬಿಡು.
  16. (ಹೊನಲು ಬೆಳಕು, ಯಂತ್ರ, ಮೊದಲಾದವನ್ನು) ಆರಿಸು; ನಿಲ್ಲಿಸು.
  17. (ಆತ್ಮಾರ್ಥಕ)
    1. ಜೋರಾಗಿ, ಗಟ್ಟಿಯಾಗಿ – ನಗು.
    2. ಮಿತಿಮೀರಿ ಶ್ರಮಿಸಿ, ವಿಪರೀತ ಕೆಲಸ ಮಾಡಿ ಬಳಲು: don’t kill yourself lifting them all at once ಒಂದೇ ಬಾರಿಗೆ ಅವೆಲ್ಲವನ್ನೂ ಒಟ್ಟಿಗೆ ಎತ್ತಿ ಸುಸ್ತಾಗಬೇಡ, ಬಳಲಬೇಡ.
  18. (ಆಡುಮಾತು) ಕಂಪ್ಯೂಟರ್‍ ಹೈಲ್‍ನಿಂದ(ಒಂದು ಸಾಲು, ಪ್ಯಾರಾ, ಮೊದಲಾದವನ್ನು) – ತೆಗೆದುಹಾಕು, ಕಿತ್ತುಹಾಕು.
ಅಕರ್ಮಕ ಕ್ರಿಯಾಪದ
  1. ಕೊಲ್ಲು; ಸಾಯಿಸು; ವಧಿಸು.
  2. ಕೊಲ್ಲುವ ಹಂತಕ್ಕೆ, ಹದಕ್ಕೆ ಬಂದಿರು: pigs do not kill well at that age ಆ ವಯಸ್ಸಿನಲ್ಲಿ ಹಂದಿಗಳು ಕೊಲ್ಲುವ ಹದಕ್ಕೆ ಬಂದಿರುವುದಿಲ್ಲ.
ಪದಗುಚ್ಛ
  1. kill off
    1. (ಬಹಳ ಜನ ಮೊದಲಾದವರನ್ನು) ಕೊಂದುಬಿಡು; ಮುಗಿಸಿಬಿಡು; ಕೊಂದು ಹಾಕು.
    2. (ಬಹಳ ವಸ್ತುಗಳು ಮೊದಲಾದವನ್ನು) ಪೂರ್ತಿ ನಾಶಮಾಡು, ಧ್ವಂಸಮಾಡು.
    3. (ಗ್ರಂಥಕರ್ತನ ವಿಷಯದಲ್ಲಿ) (ಪಾತ್ರವನ್ನು) ಸಾಯಿಸು; ಸಾಯುವಂತೆ ನಿರೂಪಿಸು.
  2. kill oneself (ಆಡುಮಾತು) ಅನಗತ್ಯವಾಗಿ ಶ್ರಮಪಡು; ಅನಾವಶ್ಯಕವಾಗಿ ಶ್ರಮಿಸು; ಮಿತಿಮೀರಿ ದುಡಿ.
  3. kill or cure (ಔಷಧಗಳ ವಿಷಯದಲ್ಲಿ ಯಾ ರೂಪ) ಉಳಿಸು ಯಾ ಅಳಿಸು; ಬದುಕಿಸು ಯಾ ಸಾಯಿಸು; (ರೋಗಿಯನ್ನು) ಗುಣಪಡಿಸು ಯಾ ಕೊಲ್ಲು.
  4. kill with kindness ಅತಿ ಪ್ರೀತಿಯಿಂದ ಯಾ ಮುದ್ದಿನಿಂದ (ಒಬ್ಬನಿಗೆ)–ಹಾನಿ ಮಾಡು, ಹಾಳು ಮಾಡು, ಕೆಡಕು ತರು.
  5. shoot to kill (ಕೇವಲ ಎಚ್ಚರಿಕೆ ಕೊಡಲು, ಬೆದರಿಸಲು ಯಾ ಗಾಯಗೊಳಿಸಲು ಆಗಿರದೆ) ಕೊಲ್ಲಲೆಂದೇ, ಸಾಯಿಸುವುದಕ್ಕಾಗಿಯೇ – ಗುಂಡು ಹಾರಿಸು.
ನುಡಿಗಟ್ಟು

kill two birds with one stone ಒಂದೇ ಕಲ್ಲಿಗೆ ಎರಡು ಹಕ್ಕಿ ಕೆಡವು; ಒಂದೇ ಯತ್ನದಿಂದ ಎರಡು ಫಲ ಪಡೆ.

See also 1kill
2kill ಕಿಲ್‍
ನಾಮವಾಚಕ
  1. ಕೊಲ್ಲುವುದು; ಕೊಲೆ; ವಧೆ.
  2. (ಮುಖ್ಯವಾಗಿ ಬೇಟೆಗಾರ, ವನ್ಯಮೃಗ, ಮೊದಲಾದವುಗಳಿಂದ) ಹತವಾದ ಪ್ರಾಣಿ; ಕೊಂದ ಪ್ರಾಣಿ; ಬೇಟೆ(ಯಾದ ಪ್ರಾಣಿ).
ನುಡಿಗಟ್ಟು

in at the kill (ಉದ್ಯಮವೊಂದರ) ಯಶಸ್ವೀ ಮುಕ್ತಾಯದ ಸಮಯದಲ್ಲಿ ಹಾಜರಿರು; ವಿಜಯದ ಸಮಯದಲ್ಲಿ ಹಾಜರಿರು ಯಾ ಅದರ ಫಲದಲ್ಲಿ ಪಾಲು ಪಡೆ.