Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
kill
1
kill
ಕಿಲ್
ಸಕರ್ಮಕ ಕ್ರಿಯಾಪದ
ಕೊಲ್ಲು; ಕೊಂದು ಹಾಕು; ಸಾಯಿಸು; ಪ್ರಾಣ ತೆಗೆ; ಸಾವಿಗೆ, ಮರಣಕ್ಕೆ ಗುರಿ ಮಾಡು.
(ರೋಗ, ದುಃಖ, ಆಘಾತ, ಮದ್ಯಪಾನ, ವಿಷಪಾನ, ಮೊದಲಾದವುಗಳ ವಿಷಯದಲ್ಲಿ) ಸಾಯಿಸು; ಸಾವನ್ನುಂಟುಮಾಡು; ಸಾವನ್ನು ತರು; ಸಾವಿಗೆ ಕಾರಣವಾಗು.
(ಕಥೆ ಮೊದಲಾದವುಗಳಲ್ಲಿ, ಪಾತ್ರವನ್ನು) ಕೊಲ್ಲು; ಸಾಯಿಸು; ಸತ್ತಂತೆ ನಿರೂಪಿಸು:
kill your villain in the last chapter
ನಿನ್ನ ಖಳನಾಯಕನನ್ನು ಕೊನೆಯ ಅಧ್ಯಾಯದಲ್ಲಿ ಕೊಲ್ಲು.
(ಗಿಡ, ರೋಗ, ಮೊದಲಾದವುಗಳ) ಸತ್ತ್ವನಾಶ ಮಾಡು; ಜೀವ ತೆಗೆ.
(ಭಾವಗಳು ಮೊದಲಾದವನ್ನು) ಕೊನೆಗಾಣಿಸಿಬಿಡು; ಅಡಗಿಸಿ ಬಿಡು; ಅಳಿಯಿಸು; ಧ್ವಂಸ ಮಾಡು.
(ಬಣ್ಣ ಮೊದಲಾದವನ್ನು, ವ್ಯತಿರಿಕ್ತವಾದ ಬಣ್ಣ ಮೊದಲಾದವುಗಳಿಂದ) ಕಳೆಗುಂದಿಸು; ನಿಸ್ತೇಜಗೊಳಿಸು; ವಿವರ್ಣಗೊಳಿಸು; ನಿಷ್ಪ್ರಭಾವಗೊಳಿಸು.
(ಭವಿಷ್ಯತ್ತನ್ನು ಎದುರುನೋಡುತ್ತಾ, ಭಾವೀ ಘಟನೆಯನ್ನು ನಿರೀಕ್ಷಿಸುತ್ತಾ) ಹೊತ್ತು ಕಳೆ; ಕಾಲ ತಳ್ಳು; (ವ್ಯರ್ಥವಾಗಿ) ಸಮಯ ಪೋಲು ಮಾಡು.
(ಭಾರಿ ಮೆಚ್ಚಿಗೆ, ಖುಷಿ, ವಿನೋದ, ಮೊದಲಾದವುಗಳಲ್ಲಿ ಒಬ್ಬನನ್ನು) ಮುಳುಗಿಸಿ ಬಿಡು; ಪರವಶಗೊಳಿಸು:
dressed to kill
ಪರವಶಗೊಳಿಸುವಂತೆ ಬೆಡಗಿನಿಂದ ಯಾ ಆಕರ್ಷಕವಾಗಿ ಸಿಂಗರಿಸಿಕೊಂಡ, ಅಲಂಕರಿಸಿಕೊಂಡ.
(ಲಾನ್ ಟೆನಿಸ್) (ಹಿಂದಕ್ಕೆ ಕಳುಹಲಾಗದಂತೆ, ಚೆಂಡನ್ನು) ಬಾರಿಸು; ಹೊಡೆ.
(ಹುಟ್ಬಾಲ್) (ಮುಂದಕ್ಕೆ ಚಲಿಸದಂತೆ ಚೆಂಡನ್ನು) ತಡೆದು ಬಿಡು; ನಿಲ್ಲಿಸಿಬಿಡು; ನಿಶ್ಚಲಗೊಳಿಸು.
(ಪಾರ್ಲಿಮೆಂಟಿನಲ್ಲಿ, ಮಸೂದೆಯನ್ನು) ಹತ ಮಾಡಿಬಿಡು; ಕೊಂದು ಹಾಕು; ನಿಪಾತ ಮಾಡಿಬಿಡು; ಪೂರ್ತಿಯಾಗಿ ಸೋಲಿಸಿಬಿಡು; ತಲೆ ಎತ್ತದಂತೆ ಮಾಡಿಬಿಡು; ಹುಟ್ಟಡಗಿಸಿಬಿಡು.
(ಹುಸಿ ದಯೆಯಿಂದ, ದಯಾ ಭ್ರಾಂತಿಯಿಂದ) ಕೆಡಕುಂಟುಮಾಡು; ಹಾನಿಯುಂಟುಮಾಡು.
ಪ್ರಾಣಿಗಳನ್ನು ಕೊಂದು ಮಾಂಸ ಪಡೆ.
(ಆಡುಮಾತು) ತೀವ್ರ ಯಾತನೆ ಕೊಡು; ಬಹಳ ನೋವುಂಟುಮಾಡು:
my feet are killing me
ನನ್ನ ಕಾಲಡಿಗಳು ನನ್ನನ್ನು ಕೊಲ್ಲುತ್ತಿವೆ, ನನಗೆ ಸಹಿಸಲಾರದ ನೋವು ಕೊಡುತ್ತಿವೆ.
(ಆಡುಮಾತು) (ತಿಂಡಿ ತೀರ್ಥಗಳ ವಿಷಯದಲ್ಲಿ) ಧ್ವಂಸ ಮಾಡಿಬಿಡು; (ತಿಂದು, ಕುಡಿದು) ಖಾಲಿ ಮಾಡಿಬಿಡು.
(ಹೊನಲು ಬೆಳಕು, ಯಂತ್ರ, ಮೊದಲಾದವನ್ನು) ಆರಿಸು; ನಿಲ್ಲಿಸು.
(ಆತ್ಮಾರ್ಥಕ)
ಜೋರಾಗಿ, ಗಟ್ಟಿಯಾಗಿ – ನಗು.
ಮಿತಿಮೀರಿ ಶ್ರಮಿಸಿ, ವಿಪರೀತ ಕೆಲಸ ಮಾಡಿ ಬಳಲು:
don’t kill yourself lifting them all at once
ಒಂದೇ ಬಾರಿಗೆ ಅವೆಲ್ಲವನ್ನೂ ಒಟ್ಟಿಗೆ ಎತ್ತಿ ಸುಸ್ತಾಗಬೇಡ, ಬಳಲಬೇಡ.
(ಆಡುಮಾತು) ಕಂಪ್ಯೂಟರ್ ಹೈಲ್ನಿಂದ(ಒಂದು ಸಾಲು, ಪ್ಯಾರಾ, ಮೊದಲಾದವನ್ನು) – ತೆಗೆದುಹಾಕು, ಕಿತ್ತುಹಾಕು.
ಅಕರ್ಮಕ ಕ್ರಿಯಾಪದ
ಕೊಲ್ಲು; ಸಾಯಿಸು; ವಧಿಸು.
ಕೊಲ್ಲುವ ಹಂತಕ್ಕೆ, ಹದಕ್ಕೆ ಬಂದಿರು:
pigs do not kill well at that age
ಆ ವಯಸ್ಸಿನಲ್ಲಿ ಹಂದಿಗಳು ಕೊಲ್ಲುವ ಹದಕ್ಕೆ ಬಂದಿರುವುದಿಲ್ಲ.
ಪದಗುಚ್ಛ
kill off
(ಬಹಳ ಜನ ಮೊದಲಾದವರನ್ನು) ಕೊಂದುಬಿಡು; ಮುಗಿಸಿಬಿಡು; ಕೊಂದು ಹಾಕು.
(ಬಹಳ ವಸ್ತುಗಳು ಮೊದಲಾದವನ್ನು) ಪೂರ್ತಿ ನಾಶಮಾಡು, ಧ್ವಂಸಮಾಡು.
(ಗ್ರಂಥಕರ್ತನ ವಿಷಯದಲ್ಲಿ) (ಪಾತ್ರವನ್ನು) ಸಾಯಿಸು; ಸಾಯುವಂತೆ ನಿರೂಪಿಸು.
kill oneself
(ಆಡುಮಾತು) ಅನಗತ್ಯವಾಗಿ ಶ್ರಮಪಡು; ಅನಾವಶ್ಯಕವಾಗಿ ಶ್ರಮಿಸು; ಮಿತಿಮೀರಿ ದುಡಿ.
kill or cure
(ಔಷಧಗಳ ವಿಷಯದಲ್ಲಿ ಯಾ ರೂಪ) ಉಳಿಸು ಯಾ ಅಳಿಸು; ಬದುಕಿಸು ಯಾ ಸಾಯಿಸು; (ರೋಗಿಯನ್ನು) ಗುಣಪಡಿಸು ಯಾ ಕೊಲ್ಲು.
kill with kindness
ಅತಿ ಪ್ರೀತಿಯಿಂದ ಯಾ ಮುದ್ದಿನಿಂದ (ಒಬ್ಬನಿಗೆ)–ಹಾನಿ ಮಾಡು, ಹಾಳು ಮಾಡು, ಕೆಡಕು ತರು.
shoot to kill
(ಕೇವಲ ಎಚ್ಚರಿಕೆ ಕೊಡಲು, ಬೆದರಿಸಲು ಯಾ ಗಾಯಗೊಳಿಸಲು ಆಗಿರದೆ) ಕೊಲ್ಲಲೆಂದೇ, ಸಾಯಿಸುವುದಕ್ಕಾಗಿಯೇ – ಗುಂಡು ಹಾರಿಸು.
ನುಡಿಗಟ್ಟು
kill two birds with one stone
ಒಂದೇ ಕಲ್ಲಿಗೆ ಎರಡು ಹಕ್ಕಿ ಕೆಡವು; ಒಂದೇ ಯತ್ನದಿಂದ ಎರಡು ಫಲ ಪಡೆ.