See also 2jumper
1jumper ಜಂಪರ್‍
ನಾಮವಾಚಕ
  1. ಜಂಪರು; ಲಂಘಕ:
    1. ನೆಗೆಯುವವನು ಅಥವಾ ನೆಗೆಯುವ ಪ್ರಾಣಿ.
    2. ಹಾರುವ ಕೀಟ, ಉದಾಹರಣೆಗೆ ಚಿಗಟ.
  2. (ಹಿಂದಿನ ಅನುಭವದಾರನು ತೊರೆದುಬಿಟ್ಟನೆಂಬ ಅಥವಾ ಕಾಯಿದೆಯಂತೆ ಕಳೆದುಕೊಂಡನೆಂಬ ನೆವದಿಂದ, ಒಂದು ಹಕ್ಕನ್ನು, ಕಾನೂನು ಕ್ರಮಕ್ಕೆ ಕಾಯದೆ) ಸರಕ್ಕನೆ ವಶಪಡಿಸಿಕೊಳ್ಳುವವನು.
  3. ಜಂಪರು; ಮೊನಚು – ಗಡಾರಿ ಅಥವಾ ಬೈರಿಗೆ; ಬಂಡೆ ಮೊದಲಾದವನ್ನು ಒಡೆಯಲು ಸಿಡಿಮದ್ದು ತುಂಬುವುದಕ್ಕಾಗಿ ತೂತು ಕೊರೆಯಲು ಬಳಸುವ, ಉಳಿಯಲಗಿನ, ಭಾರವಾದ ಗಡಾರಿ ಅಥವಾ ಬೈರಿಗೆ.
  4. ಲಂಘನ ಪಂಥಿ; ಆರಾಧನೆಯ ಒಂದು ಅಂಗವಾಗಿ ನೆಗೆಯುತ್ತಿದ್ದ ಅಥವಾ ನೆಗೆಯುವ ವೇಲ್ಸಿನ ಮೆಥಡಿಸ್ಟ್‍ ಪಂಥದವನು ಅಥವಾ ಅನಂತರದ ಬೇರೆ ಪಂಥಗಳವನು.
  5. ಬಿಗಿ ಹೊರಜಿ; ಹಾಯಿಕಂಬ, ಕೊವೆಮರ, ಅಡ್ಡದೂಲ, ಜಂತಿ, ಮೊದಲಾದವು ಅಲ್ಲಾಡದಂತೆ ಬಿಗಿದು ಕಟ್ಟುವ ಹೊರಜಿ, ದಪ್ಪ ಹಗ್ಗ.
  6. (ವಿದ್ಯುದ್ವಿಜ್ಞಾನ) ಜಂಪರು; ವಿದ್ಯುನ್ಮಂಡಲವನ್ನು ಕೂಡಿಸುವ ಯಾ ಬೇರ್ಪಡಿಸುವ ತುಂಡು ತಂತಿ.
See also 1jumper
2jumper ಜಂಪರ್‍
ನಾಮವಾಚಕ

ಜಂಪರು:

  1. ನಾವಿಕರು ಮೊದಲಾದವರು ತೊಡುವ, ರಟ್ಟು ಬಟ್ಟೆಯ ಸಡಿಲವಾದ ಹೊರ ಅಂಗಿ.
  2. (ಅಮೆರಿಕನ್‍ ಪ್ರಯೋಗ) = pinafore dress.
  3. (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಹೆಂಗಸರು ಮತ್ತು ಮಕ್ಕಳ) ಪುಲ್‍ ಓವರು; ತಲೆಯಿಂದ ಎಳೆದು ಹಾಕಿಕೊಳ್ಳುವ ಅಥವಾ ಕಳಚುವ, ಸೊಂಟ ಮುಟ್ಟುವ, ಹೆಣೆದ, ತೋಳಿಲ್ಲದ ಹೊರಕವಚ.