See also 2joke
1joke ಜೋಕ್‍
ನಾಮವಾಚಕ
  1. ಹಾಸ್ಯ (ಪ್ರಚೋದಕ) ಉಕ್ತಿ ಅಥವಾ ಕಾರ್ಯ; ನಗು ಬರಿಸುವ ಮಾತು ಅಥವಾ ಕೆಲಸ.
  2. ಗೇಲಿ; ಲೇವಡಿ; ಪರಿಹಾಸ; ಉಪಹಾಸ; ಹಾಸ್ಯೋಕ್ತಿ; ಕುಚೋದ್ಯ; ನಗೆ ಮಾತು; ಜೋಕು; ತಮಾಷೆಯ, ವಿನೋದದ – ಮಾತು.
  3. ನಗೆಗೇಡು; ನಗೆಪಾಟಲು; ಹಾಸ್ಯಾಸ್ಪದ – ವ್ಯಕ್ತಿ, ಪರಿಸ್ಥಿತಿ ಅಥವಾ ಸಂದರ್ಭ.
ಪದಗುಚ್ಛ
  1. make a joke about (ಒಂದರ, ಒಬ್ಬನ ವಿಷಯವಾಗಿ) ಹಾಸ್ಯಮಾಡು; ಗೇಲಿ ಮಾಡು; ತಮಾಷೆ ಮಾಡು; ಲಘುವಾಗಿ ಅಥವಾ ಹಾಸ್ಯವಾಗಿ ಮಾತನಾಡು.
  2. no joke ಹುಡುಗಾಟದ ವಿಷಯವಲ್ಲ, ತಮಾಷೆಯಲ್ಲ; ಗುರುತರವಾದ ವಿಷಯ: it is no joke ಅದೇನೂ ತಮಾಷೆಯಲ್ಲ; ಅದು ಗಂಭೀರವಾದ ವಿಷಯ, ಕೆಲಸ.
  3. play a joke on (one) (ಒಬ್ಬನನ್ನು) ಹಾಸ್ಯಕ್ಕೆ, ತಮಾಷೆಗೆ ಗುರಿ ಮಾಡು; ಹಾಸ್ಯಾಸ್ಪದವಾಗಿಸು.
  4. practical joke ಕುಚೋದ್ಯ; ಕುಚೇಷ್ಟೆ; ಒಬ್ಬನನ್ನು ನಗೆಪಾಟಲು ಮಾಡಲೆಂದೇ ಅವನ ಮೇಲೆ ಮಾಡಿದ ಕುಚೇಷ್ಟೆ.
  5. standing joke ಹಾಸ್ಯಾಸ್ಪದ; ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು ಹಾಸ್ಯಾಸ್ಪದವಾದ ವಿಷಯ, ಸಂಗತಿ, ಪರಿಸ್ಥಿತಿ, ವ್ಯಕ್ತಿ, ಮೊದಲಾದವು.
  6. the joke of the town ಊರಿಗೇ ಹಾಸ್ಯಾಸ್ಪದವಾದ, ನಗೆಗೇಡಿಯಾದ – ವ್ಯಕ್ತಿ, ವಿಷಯ.
See also 1joke
2joke ಜೋಕ್‍
ಸಕರ್ಮಕ ಕ್ರಿಯಾಪದ
  1. ಹಾಸ್ಯಮಾಡು; ಗೇಲಿಮಾಡು; ತಮಾಷೆಮಾಡು.
  2. ಲೇವಡಿ ಎಬ್ಬಿಸು; ಕುಚೋದ್ಯ ಮಾಡು; ಪರಿಹಾಸ ಮಾಡು.
ಅಕರ್ಮಕ ಕ್ರಿಯಾಪದ

ಹಾಸ್ಯೋಕ್ತಿ ಆಡು; ತಮಾಷೆ ಮಾತು ಆಡು.

ಪದಗುಚ್ಛ

joking apart ಹಾಸ್ಯದ ಮಾತು ಅದಂತಿರಲಿ; ತಮಾಷೆ ನಿಲ್ಲಿಸಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೆ.