1joke
ಜೋಕ್
ನಾಮವಾಚಕ
- ಹಾಸ್ಯ (ಪ್ರಚೋದಕ) ಉಕ್ತಿ ಅಥವಾ ಕಾರ್ಯ; ನಗು ಬರಿಸುವ ಮಾತು ಅಥವಾ ಕೆಲಸ.
- ಗೇಲಿ; ಲೇವಡಿ; ಪರಿಹಾಸ; ಉಪಹಾಸ; ಹಾಸ್ಯೋಕ್ತಿ; ಕುಚೋದ್ಯ; ನಗೆ ಮಾತು; ಜೋಕು; ತಮಾಷೆಯ, ವಿನೋದದ – ಮಾತು.
- ನಗೆಗೇಡು; ನಗೆಪಾಟಲು; ಹಾಸ್ಯಾಸ್ಪದ – ವ್ಯಕ್ತಿ, ಪರಿಸ್ಥಿತಿ ಅಥವಾ ಸಂದರ್ಭ.
ಪದಗುಚ್ಛ
- make a joke about (ಒಂದರ, ಒಬ್ಬನ ವಿಷಯವಾಗಿ) ಹಾಸ್ಯಮಾಡು; ಗೇಲಿ ಮಾಡು; ತಮಾಷೆ ಮಾಡು; ಲಘುವಾಗಿ ಅಥವಾ ಹಾಸ್ಯವಾಗಿ ಮಾತನಾಡು.
- no joke ಹುಡುಗಾಟದ ವಿಷಯವಲ್ಲ, ತಮಾಷೆಯಲ್ಲ; ಗುರುತರವಾದ ವಿಷಯ: it is no joke ಅದೇನೂ ತಮಾಷೆಯಲ್ಲ; ಅದು ಗಂಭೀರವಾದ ವಿಷಯ, ಕೆಲಸ.
- play a joke on (one) (ಒಬ್ಬನನ್ನು) ಹಾಸ್ಯಕ್ಕೆ, ತಮಾಷೆಗೆ ಗುರಿ ಮಾಡು; ಹಾಸ್ಯಾಸ್ಪದವಾಗಿಸು.
- practical joke ಕುಚೋದ್ಯ; ಕುಚೇಷ್ಟೆ; ಒಬ್ಬನನ್ನು ನಗೆಪಾಟಲು ಮಾಡಲೆಂದೇ ಅವನ ಮೇಲೆ ಮಾಡಿದ ಕುಚೇಷ್ಟೆ.
- standing joke ಹಾಸ್ಯಾಸ್ಪದ; ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು ಹಾಸ್ಯಾಸ್ಪದವಾದ ವಿಷಯ, ಸಂಗತಿ, ಪರಿಸ್ಥಿತಿ, ವ್ಯಕ್ತಿ, ಮೊದಲಾದವು.
- the joke of the town ಊರಿಗೇ ಹಾಸ್ಯಾಸ್ಪದವಾದ, ನಗೆಗೇಡಿಯಾದ – ವ್ಯಕ್ತಿ, ವಿಷಯ.