See also 2job  3job  4job  5Job
1job ಜಾಬ್‍
ನಾಮವಾಚಕ
  1. (ಮುಖ್ಯವಾಗಿ ಕೂಲಿಗಾಗಿಯೋ ಪ್ರತಿಫಲಕ್ಕಾಗಿಯೋ ಮಾಡುವ) ಚೂರುಗೆಲಸ; ಪುಡಿಗೆಲಸ; ಚಿಲ್ಲರೆ ಕೆಲಸ.
  2. (ಅಶಿಷ್ಟ) ಅಪರಾಧ; ತಪ್ಪಿತ; ಮುಖ್ಯವಾಗಿ ಕೊಳ್ಳೆ, ದರೋಡೆ, ಸುಲಿಗೆ.
  3. (ಮುಖ್ಯವಾಗಿ ಉತ್ತಮವಾಗಿ ಮಾಡಿದ) ಕೆಲಸ; ದುಡಿಮೆಯ ಪರಿಣಾಮ; ಶ್ರಮದ ಫಲ.
  4. ಸ್ವಾರ್ಥಸಾಧನೆ; ಸ್ವಾರ್ಥ ಸಾಧಕ – ಕಾರ್ಯ, ಉದ್ಯಮ; ಸ್ವಂತ ಲಾಭಕ್ಕಾಗಿ ಕರ್ತವ್ಯವನ್ನು, ಸಾರ್ವಜನಿಕ ಹಿತವನ್ನು, ಬಲಿಗೊಡುವ ವ್ಯವಹಾರ.
  5. (ಸಂಬಳದ) ಉದ್ಯೋಗ; ಹುದ್ದೆ; ಚಾಕರಿ; ನೌಕರಿ.
  6. (ಆಡುಮಾತು) ಕರ್ತವ್ಯ; ಮಾಡಲೇಬೇಕಾದ ಕಾರ್ಯ, ಕೆಲಸ.
  7. (ಆಡುಮಾತು) ಶ್ರಮದ, ಪ್ರಯಾಸದ – ಕೆಲಸ.
  8. (ಕಂಪ್ಯೂಟರ್‍) ಪ್ರತ್ಯೇಕವಾಗಿ ಪರಿಗಣಿಸಿದ ಒಂದು ಕಾರ್ಯ.
ನುಡಿಗಟ್ಟು
  1. bad job
    1. ವಿಫಲ ಕಾರ್ಯ; (ದುಡಿದದ್ದೆಲ್ಲ) ವ್ಯರ್ಥವಾದ ಕೆಲಸ: (ದುಡಿಮೆಯೆಲ್ಲ) ಮಣ್ಣುಪಾಲಾದ ಕೆಲಸ; (ಪರಿಶ್ರಮವೆಲ್ಲ) ವ್ಯರ್ಥವಾದ ಕಾರ್ಯ.
    2. ಅತೃಪ್ತಿಕರವಾದ ಸ್ಥಿತಿ; ದುಃಸ್ಥಿತಿ: ಹದಗೆಟ್ಟ ಪರಿಸ್ಥಿತಿ.
  2. good job ಸುಸ್ಥಿತಿ; ಒಳ್ಳೆಯ ಪರಿಸ್ಥಿತಿ; ತೃಪ್ತಿಕರ ಪರಿಸ್ಥಿತಿ.
  3. jobs for the boys (ಆಡುಮಾತು) ತನ್ನ ಬೆಂಬಲಿಗರಿಗೆ (ಪ್ರತಿಫಲವಾಗಿ) ಕೊಡಬಹುದಾದ ಲಾಭಕರವಾದ, ಅನುಕೂಲಕರವಾದ ಕೆಲಸಗಳು, ಹುದ್ದೆಗಳು.
  4. just the job (ಅಶಿಷ್ಟ) (ವಸ್ತು, ಕೆಲಸ, ಮೊದಲಾದವುಗಳ ವಿಷಯದಲ್ಲಿ) ಯಾವುದು ಬೇಕೋ ಅದೇ; ಬಯಸಿದ್ದೇ.
  5. make a good job of (ಕೈಗೊಂಡ) ಕೆಲಸವನ್ನು ಚೆನ್ನಾಗಿ, ತೃಪ್ತಿಕರವಾಗಿ, ಸಮರ್ಪಕವಾಗಿ – ಮಾಡು.
  6. make the best of a bad job ಅತೃಪ್ತಿಕರ ಪರಿಸ್ಥಿತಿಯಲ್ಲೂ ಕೈಲಾದದ್ದನ್ನು, ಸಾಧ್ಯವಾದುದನ್ನು ಮಾಡು.
  7. on the job
    1. ಕೆಲಸದಲ್ಲಿ ತೊಡಗಿ; ಕೆಲಸಮಾಡುತ್ತಾ; ಕಾರ್ಯನಿರತನಾಗಿ.
    2. ಲೈಂಗಿಕಕ್ರಿಯೆಯಲ್ಲಿ ತೊಡಗಿ; ಸಂಭೋಗಿಸುತ್ತಾ.
  8. out of a job ಕೆಲಸವಿಲ್ಲದೆ; ಉದ್ಯೋಗವಿಲ್ಲದೆ; ನಿರುದ್ಯೋಗಿಯಾಗಿ.
See also 1job  3job  4job  5Job
2job ಜಾಬ್‍
ಕ್ರಿಯಾಪದ

(ವರ್ತಮಾನ ಕೃದಂತ jobbing, ಭೂತರೂಪ ಮತ್ತು ಭೂತಕೃದಂತ jobbed).

ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ)
    1. (ಕುದುರೆ, ಬಂಡಿ, ಮೊದಲಾದವನ್ನು ಗೊತ್ತಾದ ಕೆಲಸಕ್ಕೆ ಅಥವಾ ಅವಧಿಗೆ) ಬಾಡಿಗೆಗೆ ತೆಗೆದುಕೊ.
    2. ಈ ರೀತಿ ಬಾಡಿಗೆಗೆ ಕೊಡು.
  2. (ಬಂಡವಾಳ ಪತ್ರಗಳ ಅಥವಾ ಸ್ಟಾಕ್‍ಗಳ) ದಳ್ಳಾಳಿ ವ್ಯಾಪಾರ ಮಾಡು; ದಳ್ಳಾಳಿ – ವ್ಯವಹಾರ ನಡೆಸು ( ಅಕರ್ಮಕ ಕ್ರಿಯಾಪದ ಸಹ).
  3. (ಬಂಡವಾಳ ಪತ್ರಗಳು ಮತ್ತು ಸರಕುಗಳು, ಮೊದಲಾದವನ್ನು) ಕೊಳ್ಳು ಮತ್ತು ಮಾರು ( ಅಕರ್ಮಕ ಕ್ರಿಯಾಪದ ಸಹ).
  4. ನಂಬಿ ವಹಿಸಿದ ಅಧಿಕಾರಸ್ಥಾನವನ್ನು ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊ.
  5. (ಒಂದು ವಿಷಯದಲ್ಲಿ ಅಥವಾ ವ್ಯವಹಾರದಲ್ಲಿ) ಅನೀತಿಯಿಂದ ವರ್ತಿಸು; ದುರ್ವ್ಯವಹಾರ ಮಾಡು; ದುರ್ವ್ಯಾಪಾರ ಮಾಡು.
  6. (ಅಶಿಷ್ಟ) ಮೋಸಮಾಡು; ಟೋಪಿಹಾಕು; ವಂಚಿಸು.
ಅಕರ್ಮಕ ಕ್ರಿಯಾಪದ
  1. ಸಣ್ಣಪುಟ್ಟ ಕೆಲಸ, ಚಿಲ್ಲರೆಗೆಲಸ, ಪುಡಿಗೆಲಸ ಅಥವಾ ಬಿಡಿಗೆಲಸ – ಮಾಡು.
  2. (ನಂಬಿ ವಹಿಸಿದ ಕೆಲಸವನ್ನು) ಸ್ವಾರ್ಥಕ್ಕಾಗಿ ಬಳಸಿಕೊ, ದುರುಪಯೋಗ ಮಾಡಿಕೊ.
ನುಡಿಗಟ್ಟು

job backwards (ರೂಪಕವಾಗಿ) ಹಿನ್ನರಿವಿನಿಂದ ವರ್ತಿಸು; ಹಿಂಗಾಣ್ಕೆಯಿಂದ ಮಾತನಾಡು; ಪಶ್ಚಾತ್‍ ಜ್ಞಾನದಿಂದ ವರ್ತಿಸು; ತದನಂತರದ ಅರಿವಿನಿಂದ ಮಾತನಾಡು.

See also 1job  2job  4job  5Job
3job ಜಾಬ್‍
ಕ್ರಿಯಾಪದ
(ವರ್ತಮಾನ ಕೃದಂತ jobbing, ಭೂತರೂಪ ಮತ್ತು ಭೂತಕೃದಂತ jobbed).
ಸಕರ್ಮಕ ಕ್ರಿಯಾಪದ
  1. (ಸ್ವಲ್ಪ) ತಿವಿ; ಚುಚ್ಚು; ಇರಿ; ಕುಕ್ಕು.
  2. (ಕುದುರೆಯ) ಕಡಿವಾಣವನ್ನು – ಜಗ್ಗು, ಎಳೆ, ತುಯ್ಯು.
ಅಕರ್ಮಕ ಕ್ರಿಯಾಪದ

(ಒಂದು ವಸ್ತುವಿಗೆ, ವಸ್ತುವಿನೊಳಕ್ಕೆ) ಚುಚ್ಚಿಕೊಂಡು–ಹೋಗು, ಹೊಗು: the tools jobbed into the softer part ಮೆದುವಾದ ಭಾಗದೊಳಕ್ಕೆ ಉಪಕರಣಗಳು ಚುಚ್ಚಿಕೊಂಡು ಹೊಕ್ಕವು.

See also 1job  2job  3job  5Job
4job ಜಾಬ್‍
ನಾಮವಾಚಕ
  1. ತಿವಿತ; ಚುಚ್ಚುವಿಕೆ.
  2. (ಕುದುರೆಯ) ಕಡಿವಾಣವನ್ನು – ಜಗ್ಗುವುದು, ಎಳೆಯುವದು, ತುಯ್ಯುವುದು.
See also 1job  2job  3job  4job
5Job ಜೋಬ್‍
ನಾಮವಾಚಕ

ಜೋಬ್‍; ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಬುಕ್‍ ಆಹ್‍ ಜೋಬ್‍ ಪ್ರಕರಣದ, ಅತಿಕಷ್ಟ ದೆಸೆಯಲ್ಲಿಯೂ ಧೃತಿಗೆಡದ ಕಥಾನಾಯಕ.

ನುಡಿಗಟ್ಟು

would try the patience of Job ಜೋಬ್‍ನಂಥವನ ತಾಳ್ಮೆಯನ್ನೂ ಕಳೆಯುತ್ತದೆ. ಪರೀಕ್ಷಿಸುತ್ತದೆ; ಎಷ್ಟೇ ಸಹನೆಯುಳ್ಳವನನ್ನಾದರೂ ತಾಳ್ಮೆಗೆಡಿಸುತ್ತದೆ, ರೇಗಿಸುತ್ತದೆ.