See also 2job  3job  4job  5Job
1job ಜಾಬ್‍
ನಾಮವಾಚಕ
  1. (ಮುಖ್ಯವಾಗಿ ಕೂಲಿಗಾಗಿಯೋ ಪ್ರತಿಫಲಕ್ಕಾಗಿಯೋ ಮಾಡುವ) ಚೂರುಗೆಲಸ; ಪುಡಿಗೆಲಸ; ಚಿಲ್ಲರೆ ಕೆಲಸ.
  2. (ಅಶಿಷ್ಟ) ಅಪರಾಧ; ತಪ್ಪಿತ; ಮುಖ್ಯವಾಗಿ ಕೊಳ್ಳೆ, ದರೋಡೆ, ಸುಲಿಗೆ.
  3. (ಮುಖ್ಯವಾಗಿ ಉತ್ತಮವಾಗಿ ಮಾಡಿದ) ಕೆಲಸ; ದುಡಿಮೆಯ ಪರಿಣಾಮ; ಶ್ರಮದ ಫಲ.
  4. ಸ್ವಾರ್ಥಸಾಧನೆ; ಸ್ವಾರ್ಥ ಸಾಧಕ – ಕಾರ್ಯ, ಉದ್ಯಮ; ಸ್ವಂತ ಲಾಭಕ್ಕಾಗಿ ಕರ್ತವ್ಯವನ್ನು, ಸಾರ್ವಜನಿಕ ಹಿತವನ್ನು, ಬಲಿಗೊಡುವ ವ್ಯವಹಾರ.
  5. (ಸಂಬಳದ) ಉದ್ಯೋಗ; ಹುದ್ದೆ; ಚಾಕರಿ; ನೌಕರಿ.
  6. (ಆಡುಮಾತು) ಕರ್ತವ್ಯ; ಮಾಡಲೇಬೇಕಾದ ಕಾರ್ಯ, ಕೆಲಸ.
  7. (ಆಡುಮಾತು) ಶ್ರಮದ, ಪ್ರಯಾಸದ – ಕೆಲಸ.
  8. (ಕಂಪ್ಯೂಟರ್‍) ಪ್ರತ್ಯೇಕವಾಗಿ ಪರಿಗಣಿಸಿದ ಒಂದು ಕಾರ್ಯ.
ನುಡಿಗಟ್ಟು
  1. bad job
    1. ವಿಫಲ ಕಾರ್ಯ; (ದುಡಿದದ್ದೆಲ್ಲ) ವ್ಯರ್ಥವಾದ ಕೆಲಸ: (ದುಡಿಮೆಯೆಲ್ಲ) ಮಣ್ಣುಪಾಲಾದ ಕೆಲಸ; (ಪರಿಶ್ರಮವೆಲ್ಲ) ವ್ಯರ್ಥವಾದ ಕಾರ್ಯ.
    2. ಅತೃಪ್ತಿಕರವಾದ ಸ್ಥಿತಿ; ದುಃಸ್ಥಿತಿ: ಹದಗೆಟ್ಟ ಪರಿಸ್ಥಿತಿ.
  2. good job ಸುಸ್ಥಿತಿ; ಒಳ್ಳೆಯ ಪರಿಸ್ಥಿತಿ; ತೃಪ್ತಿಕರ ಪರಿಸ್ಥಿತಿ.
  3. jobs for the boys (ಆಡುಮಾತು) ತನ್ನ ಬೆಂಬಲಿಗರಿಗೆ (ಪ್ರತಿಫಲವಾಗಿ) ಕೊಡಬಹುದಾದ ಲಾಭಕರವಾದ, ಅನುಕೂಲಕರವಾದ ಕೆಲಸಗಳು, ಹುದ್ದೆಗಳು.
  4. just the job (ಅಶಿಷ್ಟ) (ವಸ್ತು, ಕೆಲಸ, ಮೊದಲಾದವುಗಳ ವಿಷಯದಲ್ಲಿ) ಯಾವುದು ಬೇಕೋ ಅದೇ; ಬಯಸಿದ್ದೇ.
  5. make a good job of (ಕೈಗೊಂಡ) ಕೆಲಸವನ್ನು ಚೆನ್ನಾಗಿ, ತೃಪ್ತಿಕರವಾಗಿ, ಸಮರ್ಪಕವಾಗಿ – ಮಾಡು.
  6. make the best of a bad job ಅತೃಪ್ತಿಕರ ಪರಿಸ್ಥಿತಿಯಲ್ಲೂ ಕೈಲಾದದ್ದನ್ನು, ಸಾಧ್ಯವಾದುದನ್ನು ಮಾಡು.
  7. on the job
    1. ಕೆಲಸದಲ್ಲಿ ತೊಡಗಿ; ಕೆಲಸಮಾಡುತ್ತಾ; ಕಾರ್ಯನಿರತನಾಗಿ.
    2. ಲೈಂಗಿಕಕ್ರಿಯೆಯಲ್ಲಿ ತೊಡಗಿ; ಸಂಭೋಗಿಸುತ್ತಾ.
  8. out of a job ಕೆಲಸವಿಲ್ಲದೆ; ಉದ್ಯೋಗವಿಲ್ಲದೆ; ನಿರುದ್ಯೋಗಿಯಾಗಿ.