See also 2jink
1jink ಜಿಂಕ್‍
ಸಕರ್ಮಕ ಕ್ರಿಯಾಪದ

ನುಣುಚಿಕೊಂಡು ತಪ್ಪಿಸಿಕೊ, ಸಿಗದೆ ಹೋಗು.

ಅಕರ್ಮಕ ಕ್ರಿಯಾಪದ
  1. ನುಣುಚಿಕೊ; ನುಸುಳಿಕೊ; ತಪ್ಪಿಸಿಕೊ; ಸಿಗದಂತೆ ಚಲಿಸು.
  2. (ರಗ್ಬಿ ಕಾಲ್ಚೆಂಡಾಟದಲ್ಲಿ) ವಂಚಿಸುವ ಚಲನೆ ಮಾಡು.
  3. (ಅಶಿಷ್ಟ)
    1. (ವಿಮಾನ ವಿನಾಶದ ಹಿರಂಗಿ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು) ಸರಕ್ಕನೆ ವಿಮಾನದ ದಿಕ್ಕು ಬದಲಾಯಿಸುವಂತಾಗು.
    2. (ವಿಮಾನದ ವಿಷಯದಲ್ಲಿ) ಸರಕ್ಕನೆ ದಿಕ್ಕು ಬದಲಾಯಿಸು, ತಿರುಗು.
See also 1jink
2jink ಜಿಂಕ್‍
ನಾಮವಾಚಕ

ಜಾರಿಕೊಳ್ಳುವುದು; ನುಸುಳಿಕೊಳ್ಳುವುದು; ನುಣುಚಿಕೊಳ್ಳುವುದು; ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುವುದು.

ನುಡಿಗಟ್ಟು

high jinks ಮೋಜು; ನಲಿದಾಟ; ನಲಿವು ನಗೆಗಳಿಂದ ಕೂಡಿದ ಆಟ; ವಿನೋದಮಯವಾದ ಆಟಪಾಟಗಳು.