See also 2jest
1jest ಜೆಸ್ಟ್‍
ನಾಮವಾಚಕ
  1. ತಮಾಷೆ; ಪರಿಹಾಸ್ಯ; ಉಪಹಾಸ; ಒಳ್ಳೆಯ ಮನಸ್ಸಿನಿಂದ ಪರಸ್ಪರ ಗೇಲಿ ಮಾಡುವುದು.
  2. ಮೂದಲಿಕೆ; ಅಪಹಾಸ್ಯ; ಕುಚೋದ್ಯ; ಗೇಲಿ; ಲೇವಡಿ; ಮೊನೆಮಾತು; ಚುಚ್ಚು ಹಾಸ್ಯ.
  3. ನಗೆ; ಹಾಸ್ಯ.
  4. ತಮಾಷೆ; ವಿನೋದ.
  5. ನಗೆಗೀಡಾದ, ಹಾಸ್ಯಾಸ್ಪದವಾದ ವ್ಯಕ್ತಿ, ವಸ್ತು: a standing jest ಸದಾ ನಗೆಗೀಡಾಗುವ ವ್ಯಕ್ತಿ, ವಸ್ತು.
ಪದಗುಚ್ಛ
  1. break a jest ಹಾಸ್ಯೋಕ್ತಿಯನ್ನು ಆಡು, ನುಡಿ.
  2. in jest ಹಾಸ್ಯ(ರೂಪ)ದಲ್ಲಿ; (ಕೇವಲ) ತಮಾಷೆಗಾಗಿ; ವಿನೋದಕ್ಕಾಗಿ.
See also 1jest
2jest ಜೆಸ್ಟ್‍
ಅಕರ್ಮಕ ಕ್ರಿಯಾಪದ
  1. ಹಾಸ್ಯ ಮಾಡು; ತಮಾಷೆ ಮಾಡು; ವಿನೋದ ಮಾಡು.
  2. ಅಪಹಾಸ್ಯ ಮಾಡು; ಕುಚೋದ್ಯ ಮಾಡು; ಗೇಲಿ ಮಾಡು; ಲೇವಡಿ ಎಬ್ಬಿಸು.
  3. ಹಗುರವಾಗಿ, ಲಘುವಾಗಿ – ಪರಿಗಣಿಸು, ಮಾತನಾಡು ಅಥವಾ ನಡೆದುಕೊ; ಗಂಭೀರವಾದ ಅಥವಾ ಗುರುತರವಾದ ವಿಷಯಗಳನ್ನು ಲಘುವಾಗಿ ಕಾಣು ಅಥವಾ ಅವುಗಳ ವಿಷಯದಲ್ಲಿಲಘುವಾಗಿ ವರ್ತಿಸು, ಮಾತನಾಡು.