See also 2jacket
1jacket ಜ್ಯಾಕಿಟ್‍
ನಾಮವಾಚಕ
  1. ಜಾಕೆಟ್ಟು; ಜಾಕೀಟು; ಕಂಚುಕ; ಕವಚ:
    1. ಗಂಡಸಿನ ಅಥವಾ ಹೆಂಗಸಿನ, ತೋಳುಳ್ಳ ನಡುವಂಗಿ.
    2. ಅದೇ ರೀತಿ ಧರಿಸುವ ಇತರ ವಸ್ತು.
  2. ಹಂಡೆಕವಚ; ಹಂಡೆ ಹೊದಿಕೆ; ರಕ್ಷಣೆ, ಶಾಖ ತಡೆತ, ಮೊದಲಾದವಕ್ಕಾಗಿ ಬಾಯ್ಲರಿನ ಅಥವಾ ಕುದಿಹಂಡೆಯ ಸುತ್ತಲೂ ಹೊದಿಸುವ ಹೊದಿಕೆ, ಆವರಣ, ಕವಚ.
  3. (ಪುಸ್ತಕದ) ಹೊರ – ಹೊದಿಕೆ, ಕವಚ, ಮುಸುಕು; ಮಾರಾಟಕ್ಕಾಗಿ ಪ್ರದರ್ಶಿಸುವ ಪುಸ್ತಕದ ಮೇಲ್ಗಡೆಯ, ಬಣ್ಣದ ಚಿತ್ರ ಮೊದಲಾದವುಗಳಿರುವ, ಸಡಿಲವಾದ ಮರೆ ಹಾಳೆ.
  4. ಪ್ರಾಣಿಯ (ನೈಸರ್ಗಿಕ) ಮೈ ಕೂದಲು.
  5. ಆಲೂಗೆಡ್ಡೆಯ ಸಿಪ್ಪೆ (ಮುಖ್ಯವಾಗಿ ಉಂಡೆಯಾಗಿ ಬೇಯಿಸಿದಾಗಿನದು).
ಪದಗುಚ್ಛ

in their jackets (ಅಲೂಗೆಡ್ಡೆ ಮೊದಲಾದವುಗಳ ವಿಷಯದಲ್ಲಿ) ಸಿಪ್ಪೆಸಹಿತ; ಸಿಪ್ಪೆ ಸುಲಿಯದೆ, ತೆಗೆಯದೆ: potatoes cooked in their jackets ಸಿಪ್ಪೆ ಸುಲಿಯದೆ ಬೇಯಿಸದೆ ಅಲೂಗೆಡ್ಡೆಗಳ್ಳು.

ನುಡಿಗಟ್ಟು
See also 1jacket
2jacket ಜ್ಯಾಕಿಟ್‍
ಸಕರ್ಮಕ ಕ್ರಿಯಾಪದ
  1. ನಡುವಂಗಿ ಅಥವಾ ಕವಚ-ತೊಡಿಸು.
  2. (ರೂಪಕವಾಗಿ) ಹೊರಕವಚದಲ್ಲಿ ಮುಚ್ಚು; ಮುಸುಕು – ಹಾಕು, ತೊಡಿಸು: reports which had been jacketed ಮುಸುಕು ತೊಡಿಸಿದ, ಮರೆಮಾಚಿದ – ವರದಿಗಳು.