See also 2irony
1irony ಐರನಿ
ನಾಮವಾಚಕ
(ಬಹುವಚನ ironies).
  1. ಕಟಕಿ; ವ್ಯಂಗ್ಯ; ಅಣಕ; ಐರನಿ; ಮುಖ್ಯವಾಗಿ ಒಬ್ಬನ ಅಭಿಪ್ರಾಯ ಅಲ್ಲಗಳೆಯಲು, ಅದನ್ನೇ ಒಪ್ಪುವಂತೆ ನಟಿಸಿ ಮಾತನಾಡಿ ವಿರುದ್ಧಾಭಿಪ್ರಾಯ ಸೂಚಿಸುವುದು ಯಾ ಹಾಗೆ ಸೂಚಿಸಿದ ಮಾತು.
  2. (ವಿಧಿ, ದಶೆ, ಮೊದಲಾದವುಗಳ) ದುರ್ಘಟನೆ; ದುರ್ವಿಧಿ; ಅಸಂಗತ ಘಟನೆ; ವಿಧಿಯ ಅಣಕ; ವಿಧಿ ವಿಡಂಬನ; ಸಹಜವಾಗಿ ಅಪೇಕ್ಷಣೀಯವಾಗಿದ್ದು, ಹಿತಕಾರಕ ದೃಷ್ಟಿಯಿಂದಲೋ ಎಂಬಂತೆ ತೋರಿದರೂ ನಿಜವಾಗಿ ದ್ವೇಷಾಸೂಯೆಗಳಿಂದ ಕೂಡಿದ್ದು, ಅಕಾಲದಲ್ಲಿ ಅಸಂಗತವಾಗಿ ಸಂಭವಿಸುವ ದುರ್ಘಟನೆ.
  3. (ಮಾತಿನ) ವ್ಯಂಗ್ಯ; ಧ್ವನಿ; ಗೊತ್ತಿದ್ದವರಿಗೆ ಮಾತ್ರ ಒಳ ಅರ್ಥವೂ ಉಳಿದವರಿಗೆ (ಮುಖ್ಯವಾಗಿ ಸಂಬಂಧಿಸಿದವರಿಗೆ) ಹೊರತೋರಿಕೆಯ ಅರ್ಥವೂ ಬರುವ, ಬರುವಂತೆ ಬಳಸಿದ, ಪದ ಪ್ರಯೋಗ.
ಪದಗುಚ್ಛ

irony of fate = 1irony(2).

See also 1irony
2irony ಐರನಿ
ಗುಣವಾಚಕ

ಕಬ್ಬಿಣದ; ಕಬ್ಬಿಣದಂಥ; ಕಬ್ಬಿಣದ ಅಂಶವುಳ್ಳ: irony sands ಕಬ್ಬಿಣದ ಅಂಶವುಳ್ಳ ಮರಳು. an irony flavour ಕಬ್ಬಿಣದ ಸ್ವಾದ, ರುಚಿ.