1intermediate ಇಂಟರ್‍ಈಡಿಅಟ್‍
ಗುಣವಾಚಕ
  1. (ಕಾಲ, ದೇಶ ಯಾ ಕ್ರಮಗಳ ವಿಷಯದಲ್ಲಿ, ಎರಡು ವಸ್ತುಗಳ) ನಡುವೆ – ಬರುವ, ವರ್ತಿಸುವ; ಮಧ್ಯವರ್ತಿ; ನಡುವಣ.
  2. (ಕ್ಷಿಪಣಿಯ ವ್ಯಾಪ್ತಿಯ ವಿಷಯದಲ್ಲಿ) ಖಂಡಾಂತರಕ್ಕಿಂತ ಕಡಿಮೆ ದೂರದ; ಮಧ್ಯಸ್ಥ ದರ್ಜೆಯ.
2intermediate ಇಂಟರ್‍ಈಡಿಅಟ್‍
ನಾಮವಾಚಕ
  1. ಮಧ್ಯವರ್ತಿ; ಎರಡು ವಸ್ತುಗಳ ನಡುವಣ ವಸ್ತು.
  2. (ರಸಾಯನವಿಜ್ಞಾನ) ಮಧ್ಯಂತರ (ಸಂಯುಕ್ತ); ಒಂದು ಪ್ರತಿಕ್ರಿಯೆಯಿಂದ ಉತ್ಪತ್ತಿಯಾಗಿ ಇನ್ನೊಂದರಲ್ಲಿ ಭಾಗವಹಿಸುವ ಸಂಯುಕ್ತ, ಮುಖ್ಯವಾಗಿ ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದ, ರಂಗುಗಳು, ಪ್ಲಾಸ್ಟಿಕ್ಕು, ಮೊದಲಾದ ವಸ್ತುಗಳನ್ನು ತಯಾರಿಸುವಲ್ಲಿ ಬಳಸುವಂಥದು.
3intermediate ಇಂಟರ್‍ಈಡಿಅಟ್‍
ಅಕರ್ಮಕ ಕ್ರಿಯಾಪದ

(ಇತರರ ನಡುವೆ) ಮಧ್ಯಸ್ಥಿಕೆ – ಮಾಡು, ವಹಿಸು; ಮಧ್ಯಸ್ಥನಾಗಿ ವರ್ತಿಸು.