See also 2interest
1interest ಇಂಟ್ರ(ಟ್ರಿ)ಸ್ಟ್‍
ನಾಮವಾಚಕ
  1. (ಆಸ್ತಿಯ ಮೇಲಿರುವ) ಕಾನೂನಿಗನುಸಾರವಾದ – ಆಸಕ್ತಿ, ಬಾಧ್ಯತೆ, ಹೊಣೆಗಾರಿಕೆ, ಹಕ್ಕು.
  2. (ವ್ಯಾಪಾರೋದ್ಯಮ ಮೊದಲಾದವುಗಳಲ್ಲಿನ) ಹಣದ – ಪಾಲು, ಭಾಗ; ಆರ್ಥಿಕ ಸಂಬಂಧ, ಆಸಕ್ತಿ.
  3. ಹಿತ; ಹಿತಾರ್ಥ; ಆಸ್ಥೆ; ಫಾಯಿದೆ; ಪ್ರಯೋಜನ; ಲಾಭ: I do it in your interest ನಿನ್ನ ಪ್ರಯೋಜನಕ್ಕಾಗಿ ಅದನ್ನು ಮಾಡುತ್ತೇನೆ.
  4. ಒಲವು; ಆಕರ್ಷಣೆ; ಆಸಕ್ತಿ; ಒಬ್ಬನಿಗೆ ಆಸಕ್ತಿಯಿರುವ ವಿಷಯ: his interests are philosophy and chess ಅವನ ಆಸಕ್ತಿಗಳೆಂದರೆ ತತ್ತ್ವಶಾಸ್ತ್ರ ಮತ್ತು ಚದುರಂಗದಾಟ.
  5. ಹಿತಾಸಕ್ತಿ:
    1. ಒಂದು ಪಂಗಡದವರಿಗೆ, ಪಕ್ಷದವರಿಗೆ ಸಂಬಂಧಿಸಿದ ತತ್ತ್ವ: this will protect Protestant interest ಇದು ಪ್ರಾಟಿಸ್ಟಂಟ್‍ ಹಿತಾಸಕ್ತಿಯನ್ನು ಸಂರಕ್ಷಿಸುತ್ತದೆ.
    2. (ವಾಣಿಜ್ಯ ಮೊದಲಾದ ವಿಷಯಗಳಲ್ಲಿ ಸಮಾನಾಸಕ್ತಿಯುಳ್ಳ, ಸಮಾನ ಹಿತಾರ್ಥವಿರುವ) ಪಂಗಡ; ಗುಂಪು; ವೃತ್ತ; ಹಿತಾಸಕ್ತಿಗಳು: the brewing interest ಮದ್ಯ ತಯಾರಕರ (ವಾಣಿಜ್ಯ) ವೃತ್ತ.
  6. ಆತ್ಮಹಿತ; ಸ್ವಾರ್ಥ; ತನ್ನ ಕ್ಷೇಮಚಿಂತನೆಯ ಸ್ವಾರ್ಥ ಪ್ರವೃತ್ತಿ: the business failed because of their competitive interests ಅವರ ಸ್ವಾರ್ಥದ ಪೈಪೋಟಿಯಿಂದಾಗಿ ಉದ್ಯಮ ಹಾಳಾಯಿತು.
  7. ಆಸಕ್ತಿ; ಕುತೂಹಲ ಕೆರಳಿಸುವಂಥದ್ದು; ಆಕರ್ಷಣೆ; ಸ್ವಾರಸ್ಯ: this has no interest for me ನನಗೆ ಇದರಲ್ಲಿ ಯಾವ ಸ್ವಾರಸ್ಯವೂ ಇಲ್ಲ.
  8. (ಸಾಲ ಕೊಟ್ಟ ಹಣಕ್ಕೆ ಕೊಡುವ) ಬಡ್ಡಿ.
  9. ವಶೀಲಿ; ಪ್ರಭಾವ; ಪ್ರಭಾವ ಬೀರುವ ಶಕ್ತಿ: he has interest with the boss ಅವನಿಗೆ ಧಣಿಯ ಮೇಲೆ ಪ್ರಭಾವ ಬೀರುವ ಶಕ್ತಿಯಿದೆ.
ಪದಗುಚ್ಛ
  1. at interest (ಸಾಲ ಪಡೆದ ಹಣದ ವಿಷಯದಲ್ಲಿ) ಬಡ್ಡಿ ಕೊಡುವ ಷರತ್ತಿನ ಮೇಲೆ; ಬಡ್ಡಿಗಾಗಿ; ಬಡ್ಡಿಯ – ಮೇಲೆ, ಮೇರೆಗೆ, ಪ್ರಕಾರ.
  2. compound interest ಚಕ್ರಬಡ್ಡಿ.
  3. simple interest ಸರಳಬಡ್ಡಿ.
ನುಡಿಗಟ್ಟು
  1. declare an (or one’s) interest ಯಾವುದೇ ಉದ್ಯಮದಲ್ಲಿ ತನ್ನ ಆರ್ಥಿಕ ಮೊದಲಾದ ಪಾಲನ್ನು ಘೋಷಿಸು, ತಿಳಿಸು.
  2. in the interest(s) of (ಯಾವುದೋ ಒಂದರ) ಹಿತದಲ್ಲಿ; ದೃಷ್ಟಿಯಿಂದ; ಹಿತಕ್ಕಾಗಿ; ಪ್ರಯೋಜನಕ್ಕಾಗಿ: in the interest of truth ಸತ್ಯದ ದೃಷ್ಟಿಯಿಂದ; ಸತ್ಯಕ್ಕಾಗಿ; ಸತ್ಯಪಾಲನೆಗಾಗಿ.
  3. to make interest (with a person) ಬೇರೊಬ್ಬನೊಡನೆ ಹಿತಾರ್ಥಕ್ಕಾಗಿ, ಆಸಕ್ತಿಗಾಗಿ – ಸೇರಿಕೊ, ಕೂಡಿಕೊ.
  4. vested interests ಪಟ್ಟಭದ್ರ ಹಿತಾಸಕ್ತಿಗಳು.
  5. with interest
    1. ಬಡ್ಡಿ ಸಹಿತ.
    2. ಹೆಚ್ಚಿನ ಬಲದಿಂದ; ಮತ್ತಷ್ಟು ಹೆಚ್ಚಾಗಿ: returned the blow with interest ಕೊಟ್ಟ ಏಟಿಗೆ ಬಡ್ಡಿ ಸೇರಿಸಿ ಹಿಂದಿರುಗಿಸಿದ; ಕೊಟ್ಟ ಏಟಿಗೆ ಮತ್ತಷ್ಟು ಸೇರಿಸಿ ಪ್ರತಿಯೇಟು ಕೊಟ್ಟ. returned his kindness with interest ಅವನು ತನಗೆ ತೋರಿಸಿದ ದಯೆಗೆ ಪ್ರತಿಯಾಗಿ ಬಡ್ಡಿ ಸಮೇತ ದಯೆ ತೋರಿಸಿದ.
See also 1interest
2interest ಇಂಟ್ರ(ಟ್ರಿ)ಸ್ಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು) ಆಸಕ್ತಿ ವಹಿಸುವಂತೆ, ಪಾಲುಗೊಳ್ಳುವಂತೆ, ಭಾಗವಹಿಸುವಂತೆ – ಮಾಡು; ಆಸಕ್ತಿ ಹುಟ್ಟಿಸು: can I interest you in this project? ಈ ಯೋಜನೆಯಲ್ಲಿ ನಾನು ನಿನಗೆ ಆಸಕ್ತಿ ಹುಟ್ಟಿಸಬಹುದೇ? ನಿನ್ನನ್ನು ಪಾಲುಗೊಳ್ಳುವಂತೆ ಮಾಡಬಹುದೆ?
  2. (ಭೂತಕೃದಂತದಲ್ಲಿ) ಸಂಬಂಧಿಸಿರು; ಆಸಕ್ತಿ ಇರು; ಪಾಕ್ಷಿಕವಾಗಿರು; ಹಿತಾಸಕ್ತಿ, ಪಕ್ಷ – ವಹಿಸಿರು: interested parties ಹಿತಾಸಕ್ತರು; ಸಂಬಂಧವುಳ್ಳವರು; ಸಂಬಂಧಪಟ್ಟವರು. interested motives ಹಿತಾಸಕ್ತಿಯುಳ್ಳ ಉದ್ದೇಶಗಳು.
  3. ಕುತೂಹಲ – ಹುಟ್ಟಿಸು, ಕೆರಳಿಸು; ಗಮನ ಸೆಳೆ; ಸ್ವಾರಸ್ಯವನ್ನುಂಟುಮಾಡು; ಅಭಿರುಚಿ ಹುಟ್ಟಿಸು: your story interests me greatly ನಿನ್ನ ಕತೆ ನನಗೆ ಬಹಳ ಕುತೂಹಲ ಹುಟ್ಟಿಸುತ್ತದೆ.
  4. ಆಸಕ್ತಿ – ತೋರು, ವಹಿಸು: interested spectators ಆಸಕ್ತ ಪ್ರೇಕ್ಷಕರು. not interested in his work ಅವನ ಕೆಲಸದಲ್ಲಿ ಆಸಕ್ತಿ ಇಲ್ಲ.