See also 1interest
2interest ಇಂಟ್ರ(ಟ್ರಿ)ಸ್ಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು) ಆಸಕ್ತಿ ವಹಿಸುವಂತೆ, ಪಾಲುಗೊಳ್ಳುವಂತೆ, ಭಾಗವಹಿಸುವಂತೆ – ಮಾಡು; ಆಸಕ್ತಿ ಹುಟ್ಟಿಸು: can I interest you in this project? ಈ ಯೋಜನೆಯಲ್ಲಿ ನಾನು ನಿನಗೆ ಆಸಕ್ತಿ ಹುಟ್ಟಿಸಬಹುದೇ? ನಿನ್ನನ್ನು ಪಾಲುಗೊಳ್ಳುವಂತೆ ಮಾಡಬಹುದೆ?
  2. (ಭೂತಕೃದಂತದಲ್ಲಿ) ಸಂಬಂಧಿಸಿರು; ಆಸಕ್ತಿ ಇರು; ಪಾಕ್ಷಿಕವಾಗಿರು; ಹಿತಾಸಕ್ತಿ, ಪಕ್ಷ – ವಹಿಸಿರು: interested parties ಹಿತಾಸಕ್ತರು; ಸಂಬಂಧವುಳ್ಳವರು; ಸಂಬಂಧಪಟ್ಟವರು. interested motives ಹಿತಾಸಕ್ತಿಯುಳ್ಳ ಉದ್ದೇಶಗಳು.
  3. ಕುತೂಹಲ – ಹುಟ್ಟಿಸು, ಕೆರಳಿಸು; ಗಮನ ಸೆಳೆ; ಸ್ವಾರಸ್ಯವನ್ನುಂಟುಮಾಡು; ಅಭಿರುಚಿ ಹುಟ್ಟಿಸು: your story interests me greatly ನಿನ್ನ ಕತೆ ನನಗೆ ಬಹಳ ಕುತೂಹಲ ಹುಟ್ಟಿಸುತ್ತದೆ.
  4. ಆಸಕ್ತಿ – ತೋರು, ವಹಿಸು: interested spectators ಆಸಕ್ತ ಪ್ರೇಕ್ಷಕರು. not interested in his work ಅವನ ಕೆಲಸದಲ್ಲಿ ಆಸಕ್ತಿ ಇಲ್ಲ.