See also 2inferior
1inferior ಇನ್‍ಹಿಅರಿಅರ್‍
ಗುಣವಾಚಕ
  1. ಕೆಳಗಿನ; ಕೆಳಗಣ.
  2. (ದರ್ಜೆ, ಗುಣ, ಮೊದಲಾದವುಗಳಲ್ಲಿ) ಕಡಮೆಯಾದ; ಕೀಳಾದ; ಅವರ; ಕೆಳದರ್ಜೆಯ; ಕೀಳುದರ್ಜೆಯ; ಕೀಳುಮಟ್ಟದ.
  3. ಕಳಪೆಯಾದ; ನಿಕೃಷ್ಟ(ಗುಣದ); ಕೀಳ್ತರದ.
  4. (ಖಗೋಳ ವಿಜ್ಞಾನ) (ಗ್ರಹಗಳ ವಿಷಯದಲ್ಲಿ) ಅಪರ; ಅಂತಃಕಕ್ಷೆಯ; ಭೂಮಿಯ ಕಕ್ಷೆಯ ಒಳಗಡೆ ಕಕ್ಷೆಯುಳ್ಳ.
  5. ಅಪರ; ಅಧಃಸ್ಥಿತ:
    1. (ಸಸ್ಯವಿಜ್ಞಾನ) (ಪುಷ್ಪಪಾತ್ರದ ವಿಷಯದಲ್ಲಿ) ಅಂಡಾಶಯದ ಕೆಳಗಿರುವ.
    2. (ಸಸ್ಯವಿಜ್ಞಾನ) (ಅಂಡಾಶಯದ ವಿಷಯದಲ್ಲಿ) ಪುಷ್ಪಪಾತ್ರದ ಕೆಳಗಿರುವ.
    3. (ಮುದ್ರಣ) ಅಕ್ಷರದಡಿಯ; ಅಕ್ಷರಾಧದ; ಅಕ್ಷರಗಳ ಕೆಳಗಡೆ ಯಾ ಸಾಲಿನ ಕೆಳಗೆ ಅಚ್ಚು ಮಾಡಿದ, ಉದಾಹರಣೆಗೆ ${\rm H}_2, {\rm C}_{\rm n}$, ಮೊದಲಾದವು.
See also 1inferior
2inferior ಇನ್‍ಹಿಅರಿಅರ್‍
ನಾಮವಾಚಕ
  1. (ಮುಖ್ಯವಾಗಿ ದರ್ಜೆಯಲ್ಲಿ) ಕೆಳಗಿನವನು; ಅವರ; ಕಡಮೆ ಅಂತಸ್ತಿನವನು: kind to inferiors ಕೆಳಗಿನವರ ವಿಷಯದಲ್ಲಿ ದಯಾಳುವಾದ.
  2. (ಮುದ್ರಣ) ಕೆಳಗಿನ ಅಕ್ಷರ ಯಾ ಸಂಖ್ಯೆ; ಸಾಲಿನ ಕೆಳಗಣ ಅಕ್ಷರ ಯಾ ಸಂಖ್ಯೆ.