See also 2indeed
1indeed ಇನ್‍ಡೀಡ್‍
ಕ್ರಿಯಾವಿಶೇಷಣ
  1. ಸತ್ಯವಾಗಿ; ದಿಟವಾಗಿ; ನಿಜಕ್ಕೂ; ನಿಶ್ಚಯವಾಗಿ; ವಾಸ್ತವವಾಗಿ: he was, indeed, a remarkable man ನಿಶ್ಚಯವಾಗಿ ಅವನು ಅಸಾಧಾರಣ ಮನುಷ್ಯ.
  2. (ವಿಶೇಷವಾಗಿ ಒತ್ತಿ ಹೇಳುವಾಗ) ನಿಜವಾಗಿಯೂ; ದಿಟವಾಗಿಯೂ; ಸತ್ಯವಾಗಿಯೂ: I shall be very glad indeed ನಿಜವಾಗಿಯೂ ನನಗೆ ತುಂಬಾ ಸಂತೋಷ. this is quick work indeed ದಿಟವಾಗಿಯೂ ಇದು ಚುರುಕಾದ ಕೆಲಸ. indeed it is ನಿಜವಾಗಿಯೂ ಅದೇ. yes, indeed ಹೌದು, ನಿಜ.
  3. (ಸತ್ಯಾಂಶವನ್ನು ಹೇಳುವಲ್ಲಿ) ನಿಜವಾಗಿ; ವಾಸ್ತವವಾಗಿ: if indeed such a thing is possible ನಿಜವಾಗಿ ಅಂಥ ಒಂದು ವಿಷಯ ಸಾಧ್ಯವಾದ ಪಕ್ಷದಲ್ಲಿ. saw here recently, indeed yesterday ಇತ್ತೀಚೆಗೆ ನೋಡಿದೆ, ನಿಜವಾಗಿ ನೆನ್ನೆ.
  4. (ಒಬ್ಬರ ಮಾತನ್ನು ಸಮರ್ಥಿಸುವಾಗ ಯಾ ವ್ಯಂಗ್ಯವಾಗಿ ನಿರಾಕರಿಸುವಾಗ) ನಿಜವಾಗಿ: who is this Mr. Rao? who is he, indeed! ಈ ರಾವ್‍ ಯಾರು? ನಿಜವಾಗಿ, ಅವರು ಯಾರು! (ಹಾಗೆಂದು ಕೇಳಬಹುದೇ ?)
  5. (ಮಾತಿನ ಅರ್ಥದ ಒಂದು ಅಂಶವನ್ನು ಒಪ್ಪಿಕೊಳ್ಳುವಾಗ) ನಿಜವಾಗಿ: there are indeed exceptions ಅಪವಾದಗಳಿವೆ, ನಿಜ.
  6. (ಪ್ರಶ್ನಾರ್ಥಕವಾಗಿ) ಹೌದೇ ? ಹಾಗೆಯೇ? ನಿಜವೇ? : “that’s Ram.” “Indeed?” “ಅವನು ರಾಮ.” “ಹೌದೇ?”
See also 1indeed
2indeed ಇನ್‍ಡೀಡ್‍
ಭಾವಸೂಚಕ ಅವ್ಯಯ
  1. ನಿಜವಾಗಿ! ಹಾಗೋ!
  2. (ವ್ಯಂಗ್ಯಾರ್ಥದಲ್ಲಿ, ತಿರಸ್ಕಾರ ಸೂಚಕವಾಗಿ, ನಂಬದೆ ಸಂದೇಹ ಸೂಚಿಸುವಾಗ) ಓಹೋ! ಹೌದೇ! ಹಾಗೋ! ದಿಟವಾಗಿ! “he praised you to me.” “did he, indeed?” “ಅವನು ನನ್ನೆದುರಿಗೆ ನಿನ್ನನ್ನು ಹೊಗಳಿದ.” “ಹೌದೇ?”