See also 2inch  3inch
1inch ಇಂಚ್‍
ನಾಮವಾಚಕ
  1. ಇಂಚು; ಅಂಗುಲ:
    1. 2.5 ಸೆಂಟಿ ಈಟರ್‍: (ಉದ್ದದ ಅಳತೆಯಲ್ಲಿ) ಒಂದು ಅಡಿಯ ಹನ್ನೆರಡನೆಯ ಒಂದು ಪಾಲು.
    2. (ನಕಾಸೆಯ ಅಳತೆಯ ಒಂದು ಮಾನ) ಇಷ್ಟು ಅಂಗುಲಕ್ಕೆ ನೆಲದ ಮೇಲೆ ಇಷ್ಟು ಮೈಲಿ ಎಂಬ ಅಳತೆ: a $2 \frac12$ inch map $2\frac12$ ಅಂಗುಲದ ನಕಾಸೆ.
    3. (ಮಳೆಯ ಮಾಪನದಲ್ಲಿ) ನೆಲದ ಮೇಲೆ ಒಂದಂಗುಲ ನೀರು ನಿಲ್ಲುವಷ್ಟು ಪ್ರಮಾಣ.
    4. (ವಾಯುಮಂಡಲದ ಯಾ ಇತರ ಒತ್ತಡದ ವಿಷಯದಲ್ಲಿ) ಪಾದರಸ ತುಂಬಿದ ಒಂದಂಗುಲ ಎತ್ತರದ ನಿಲವನ್ನು ಯಾ ಸ್ತಂಭವನ್ನು ಸಮತೂಕಗೊಳಿಸುವಷ್ಟು ಒತ್ತಡ.
  2. ಸ್ವಲ್ಪ; ಕೊಂಚ; ಲೇಶಮಾತ್ರ; ತುಸು; ಅಲ್ಪ ಪ್ರಮಾಣ: would not yield an inch ಸ್ವಲ್ಪ ಮಾತ್ರವನ್ನೂ ಬಿಟ್ಟು ಕೊಡಲು ಸಿದ್ಧನಿಲ್ಲ.
  3. (ಬಹುವಚನದಲ್ಲಿ) ಎತ್ತರ: a man of your inches ನಿನ್ನ(ಷ್ಟು) ಎತ್ತರದ ಆಳು.
ಪದಗುಚ್ಛ
  1. cubic inch ಘನ ಅಂಗುಲ; ಒಂದಂಗುಲ ಬಾಹುವುಳ್ಳ ಘನದ ಘನಫಲ.
  2. square inch ಚದರಂಗುಲ; ಒಂದಂಗುಲ ಬಾಹುವುಳ್ಳ ಚದರದ ವಿಸ್ತೀರ್ಣ.
ನುಡಿಗಟ್ಟು
  1. an inch of cold iron ಕಠಾರಿ (ಮೊದಲಾದವುಗಳಿಂದ) ಇರಿತ.
  2. by inches ಸ್ವಲ್ಪ ಸ್ವಲ್ಪವಾಗಿ; ಕೊಂಚಕೊಂಚವಾಗಿ; ಕ್ರಮೇಣ.
  3. every inch ಪೂರ್ತಿ; ಸಂಪೂರ್ಣವಾಗಿ.
  4. give him an inch and he’ll take an ell.
  5. inch by inch = ನುಡಿಗಟ್ಟು \((2)\).
  6. within an inch of one’s life ಸಾಯುವಷ್ಟರಮಟ್ಟಿಗೂ; ಸಾಯುವವರೆಗೂ: flog (person) within an inch of his life ವ್ಯಕ್ತಿಯನ್ನು ಅವನು ಸಾಯುವವರೆಗೂ ಬಡಿ; ಒಬ್ಬನನ್ನು ಸಾಯಬಡಿ.
See also 1inch  3inch
2inch ಇಂಚ್‍
ಸಕರ್ಮಕ ಕ್ರಿಯಾಪದ

(ಸ್ವಲ್ಪಸ್ವಲ್ಪವಾಗಿ) ಸರಿಸು; ಜರುಗಿಸು; ನುಸುಳಿಸು.

ಅಕರ್ಮಕ ಕ್ರಿಯಾಪದ

ಸ್ವಲ್ಪಸ್ವಲ್ಪವಾಗಿ, ಅಂಗುಲ ಅಂಗುಲವಾಗಿ ಸರಿ, ಜರುಗು, ನುಸುಳು.

See also 1inch  2inch
3inch ಇಂಚ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಸ್ಕಾಟ್ಲೆಂಡಿನಲ್ಲಿ, ವಿಶೇಷವಾಗಿ ಸ್ಥಳಗಳ ಅಂಕಿತನಾಮಗಳಲ್ಲಿ ಬಳಕೆ) ಸಣ್ಣ ದ್ವೀಪ.