See also 2immovable
1immovable ಇಮೂವಬ್‍ಲ್‍
ಗುಣವಾಚಕ
  1. ಕದಲಿಸಲಾಗದ; ಅಲ್ಲಾಡಿಸಲಾಗದ.
  2. ನಿಶ್ಚಲ; ಅಚಲ; ಕದಲದ; ಚಲನೆಯಿಲ್ಲದ.
  3. ಬದಲಾವಣೆಗೊಳಪಡದ; ಮಾರ್ಪಾಡಾಗದ; ವ್ಯತ್ಯಾಸ ಹೊಂದದ; ಬದಲಾಯಿಸಲಾಗದ: Egypt had a law immovable ಈಜಿಪ್ಟಿನಲ್ಲಿ ಮಾರ್ಪಡದ ಕಾನೂನಿತ್ತು.
  4. ಸ್ಥಿರ; ದೃಢ; ಜಗ್ಗದ; ಪಟ್ಟಾಗಿ ನಿಂತ; ವಿಚಲಿತವಾಗದ: heroes immovable by pain or pleasure ನೋವು ನಲಿವುಗಳಿಂದ ವಿಚಲಿತವಾಗದ ಧೀರರು.
  5. ಭಾವಶೂನ್ಯ; ನಿರ್ಭಾವದ; ಮನಸ್ಸು ಕರಗದ: his features were immovable ಅವನ ಮುಖಚರ್ಯೆಗಳು ಭಾವಶೂನ್ಯವಾಗಿದ್ದುವು.
  6. (ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಸ್ಥಿರಸ್ವತ್ತಿನ; ಸ್ಥಿರಾಸ್ತಿಯ; ಸ್ಥಾವರ; ಜಈನು, ಮನೆ, ಮೊದಲಾದವುಗಳುಳ್ಳ.
See also 1immovable
2immovable ಇಮೂವಬ್‍ಲ್‍
ನಾಮವಾಚಕ

(ಬಹುವಚನದಲ್ಲಿ) (ನ್ಯಾಯಶಾಸ್ತ್ರ) ಸ್ಥಿರಸ್ವತ್ತು; ಸ್ಥಿರಾಸ್ತಿ; ಸ್ಥಾವರ (ಆಸ್ತಿ); ಜಈನು, ಮನೆ, ಮೊದಲಾದವು.