1immovable
ಇಮೂವಬ್ಲ್
ಗುಣವಾಚಕ
- ಕದಲಿಸಲಾಗದ; ಅಲ್ಲಾಡಿಸಲಾಗದ.
- ನಿಶ್ಚಲ; ಅಚಲ; ಕದಲದ; ಚಲನೆಯಿಲ್ಲದ.
- ಬದಲಾವಣೆಗೊಳಪಡದ; ಮಾರ್ಪಾಡಾಗದ; ವ್ಯತ್ಯಾಸ ಹೊಂದದ; ಬದಲಾಯಿಸಲಾಗದ: Egypt had a law immovable ಈಜಿಪ್ಟಿನಲ್ಲಿ ಮಾರ್ಪಡದ ಕಾನೂನಿತ್ತು.
- ಸ್ಥಿರ; ದೃಢ; ಜಗ್ಗದ; ಪಟ್ಟಾಗಿ ನಿಂತ; ವಿಚಲಿತವಾಗದ: heroes immovable by pain or pleasure ನೋವು ನಲಿವುಗಳಿಂದ ವಿಚಲಿತವಾಗದ ಧೀರರು.
- ಭಾವಶೂನ್ಯ; ನಿರ್ಭಾವದ; ಮನಸ್ಸು ಕರಗದ: his features were immovable ಅವನ ಮುಖಚರ್ಯೆಗಳು ಭಾವಶೂನ್ಯವಾಗಿದ್ದುವು.
- (ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಸ್ಥಿರಸ್ವತ್ತಿನ; ಸ್ಥಿರಾಸ್ತಿಯ; ಸ್ಥಾವರ; ಜಈನು, ಮನೆ, ಮೊದಲಾದವುಗಳುಳ್ಳ.