See also 2immortal
1immortal ಇಮಾರ್ಟಲ್‍
ಗುಣವಾಚಕ
  1. ಸಾವಿಲ್ಲದ; ಅಮರ್ತ್ಯ; ಅಮರ: immortal fame ಅಮರ ಕೀರ್ತಿ.
  2. ದಿವ್ಯ; ದೈವೀ: immortal longings ದೈವೀಹಂಬಲಗಳು.
  3. ಅಳಿಯದ; ಅಚ್ಚಳಿಯದ; ಕೆಟ್ಟುಹೋಗದ; ಶಾಶ್ವತವಾದ; ನಶ್ವರವಲ್ಲದ; ಎಂದೆಂದಿಗೂ ಇರುವ: the world itself is not immortal ಪ್ರಪಂಚವೇ ಶಾಶ್ವತವಲ್ಲ.
  4. (ಕೀರ್ತಿ, ಪ್ರಸಿದ್ಧ ಕೃತಿಗಳು ಯಾ ಅವುಗಳ ಕರ್ತೃಗಳ ವಿಷಯದಲ್ಲಿ) ಅಳಿಯದ; ಮಾಸದ; ನಶಿಸದ; ಅಮರ; ಶಾಶ್ವತ: immortal poetry ಅಮರ ಕಾವ್ಯ.
  5. (ಆಡುಮಾತು) ಸ್ಥಿರ; ನಿತ್ಯ; ಬಹುಕಾಲವಿರುವ; ಎಂದೆಂದಿಗೂ ಇರುವ: immortal thanks for your inestimable kindness ನಿಮ್ಮ ಅಪಾರ ದಯೆಗೆ ಎಂದೆಂದಿಗೂ ವಂದನೆಗಳು.
See also 1immortal
2immortal ಇಮಾರ್ಟಲ್‍
ನಾಮವಾಚಕ
  1. ಅಮರ; ಅಮರ್ತ್ಯ.
  2. (ಮುಖ್ಯವಾಗಿ ಬಹುವಚನದಲ್ಲಿ ಗ್ರೀಕ್‍ ರೋಮನ್‍ ಪುರಾಣಗಳ) ದೇವತೆಗಳು.
  3. (ಮುಖ್ಯವಾಗಿ ಗ್ರಂಥಕರ್ತನ ವಿಷಯದಲ್ಲಿ) ಶಾಶ್ವತ ಕೀರ್ತಿವಂತ.
  4. (ಬಹುವಚನದಲ್ಲಿ) ಪುರಾತನ ಪರ್ಷಿಯಾದ ರಾಜನ ಮೈಗಾವಲು ಪಡೆ, ಅಂಗರಕ್ಷಕ ದಳ.
  5. (Immortal) ಹ್ರೆಂಚ್‍ ಅಕ್ಯಾಡೆಮಿಯ ಸಾಹಿತ್ಯ ಪರಿಷತ್ತಿನ ಸದಸ್ಯ.