See also 2hybrid
1hybrid ಹೈಬ್ರಿಡ್‍
ನಾಮವಾಚಕ
    1. ಇಬ್ಬಂದಿ; ಸಂಕರಜ; ಮಿಶ್ರಜ; ಸಂಕರ; ಮಿಶ್ರ ತಳಿ; ಬೆರಕೆ ತಳಿ; ಎರಡು ಬೇರೆ ಬೇರೆ ಜಾತಿಯ ಸಸ್ಯ ಯಾ ಪ್ರಾಣಿಗಳ ಕೂಟದಿಂದ ಹುಟ್ಟಿದ ಸಸ್ಯ ಯಾ ಪ್ರಾಣಿ.
    2. ಮಿಶ್ರ ಜನಾಂಗದವನು.
    3. ಮಿಶ್ರ ಸಂಸ್ಕೃತಿಯವನು, ಸಂಪ್ರದಾಯದವನು.
  1. (ರೂಪಕವಾಗಿ) ಸಂಕರ; ಬೆರಕೆ (ವಸ್ತು ಯಾ ಪದ); ಅಸಮಂಜಸವಾದ ಅಂಶಗಳು ಕಲೆತು ಆಗಿರುವ ವಸ್ತು ಯಾ (ಮುಖ್ಯವಾಗಿ) ಭಿನ್ನ ಭಿನ್ನ ಭಾಷೆಗಳ ಅಂಶಗಳನ್ನು ಕೂಡಿಸಿ ಸೃಷ್ಟಿಸಿದ ಪದ, ಉದಾಹರಣೆಗೆcablegram ಎಂಬ ಪದದಲ್ಲಿ. cable ಲ್ಯಾಟಿನ್‍ ಭಾಷೆಯ ಪದ, gram ಗ್ರೀಕ್‍ ಭಾಷೆಯದು.
See also 1hybrid
2hybrid ಹೈಬ್ರಿಡ್‍
ಗುಣವಾಚಕ
  1. ಇಬ್ಬಂದಿ; ಸಂಕರ ಜಾತಿಯ; ಮಿಶ್ರ ತಳಿಯ; ಬೆರಕೆ ಜಾತಿಯ; ಅಡ್ಡಜಾತಿಯ; ಬೆರಕೆಯ.
  2. ಕಲಬೆರಕೆಯ; ಬಹುಜಾತಿಯ.