See also 2hybrid
1hybrid ಹೈಬ್ರಿಡ್‍
ನಾಮವಾಚಕ
    1. ಇಬ್ಬಂದಿ; ಸಂಕರಜ; ಮಿಶ್ರಜ; ಸಂಕರ; ಮಿಶ್ರ ತಳಿ; ಬೆರಕೆ ತಳಿ; ಎರಡು ಬೇರೆ ಬೇರೆ ಜಾತಿಯ ಸಸ್ಯ ಯಾ ಪ್ರಾಣಿಗಳ ಕೂಟದಿಂದ ಹುಟ್ಟಿದ ಸಸ್ಯ ಯಾ ಪ್ರಾಣಿ.
    2. ಮಿಶ್ರ ಜನಾಂಗದವನು.
    3. ಮಿಶ್ರ ಸಂಸ್ಕೃತಿಯವನು, ಸಂಪ್ರದಾಯದವನು.
  1. (ರೂಪಕವಾಗಿ) ಸಂಕರ; ಬೆರಕೆ (ವಸ್ತು ಯಾ ಪದ); ಅಸಮಂಜಸವಾದ ಅಂಶಗಳು ಕಲೆತು ಆಗಿರುವ ವಸ್ತು ಯಾ (ಮುಖ್ಯವಾಗಿ) ಭಿನ್ನ ಭಿನ್ನ ಭಾಷೆಗಳ ಅಂಶಗಳನ್ನು ಕೂಡಿಸಿ ಸೃಷ್ಟಿಸಿದ ಪದ, ಉದಾಹರಣೆಗೆcablegram ಎಂಬ ಪದದಲ್ಲಿ. cable ಲ್ಯಾಟಿನ್‍ ಭಾಷೆಯ ಪದ, gram ಗ್ರೀಕ್‍ ಭಾಷೆಯದು.