See also 2hurdle
1hurdle ಹರ್ಡ್‍ಲ್‍
ನಾಮವಾಚಕ
  1. ತಡಕೆ; ತಡಿಕೆ; ಹಂಗಾಮಿ ಬೇಲಿ ಮೊದಲಾದವಕ್ಕಾಗಿ ಮರದ ದೆಬ್ಬೆಗಳಿಂದಲೋ ಹೆಣೆದ ಮೆದುಕಡ್ಡಿಗಳಿಂದಲೋ ತಯಾರಿಸಿದ ಚೌಕಟ್ಟು.
  2. ಹರ್ಡ್‍ಲ್‍; ತಡೆ ಚೌಕಟ್ಟು; ಓಟದ ಪಂದ್ಯದಲ್ಲಿ ಹಾರಿ ಹಾರಿ ದಾಟುತ್ತಾ ಓಡಲು ಸಮದೂರಗಳಲ್ಲಿಡುವ ಚೌಕಟ್ಟಿನ ಆಕಾರದ ಮರದ ತಡೆ. Figure: hurdle-2
  3. (ಬಹುವಚನ) ಹರ್ಡ್‍ಲ್ಸ್‍ ಓಟದ ಪಂದ್ಯ; ತಡಕೆತಡೆ ಪಂದ್ಯ.
  4. (ಚರಿತ್ರೆ) ದ್ರೋಹಿ ಚೌಕಟ್ಟು; ರಾಜ ದ್ೋಹಿಗಳನ್ನು ಮೇಲೆ ಕಟ್ಟಿ ವಧ್ಯಸ್ಥಾನಕ್ಕೆ ಎಳೆದುಕೊಂಡು ಹೋಗಲು ಬಳಸುತ್ತಿದ್ದ ಚೌಕಟ್ಟು.
  5. (ರೂಪಕವಾಗಿ) ಅಡ್ಡಿ; ತಡೆ; ಅಡಚಣೆ; ಪ್ರತಿಬಂಧಕ.
See also 1hurdle
2hurdle ಹರ್ಡ್‍ಲ್‍
ಸಕರ್ಮಕ ಕ್ರಿಯಾಪದ
  1. ತಡಕೆಬೇಲಿ ಹಾಕು; ತಡಕೆಗಳಿಂದ ಬೇಲಿ ಕಟ್ಟಿ ಒಳಕ್ಕೆ ಬರಲಾಗದಂತೆ ಮಾಡು.
  2. ತಡೆ ಚೌಕಟ್ಟುಗಳ ಮೇಲೆ ಹಾರು.
  3. (ರೂಪಕವಾಗಿ) ಅಡ್ಡಿಗಳನ್ನು, ಅಡಚಣೆಗಳನ್ನು ದಾಟು; ಅಡ್ಡಿ ಆತಂಕಗಳನ್ನು ನಿವಾರಿಸು.