See also 2hunt
1hunt ಹಂಟ್‍
ಸಕರ್ಮಕ ಕ್ರಿಯಾಪದ
  1. (ಕಾಡುಪ್ರಾಣಿಗಳನ್ನು, ಮುಖ್ಯವಾಗಿ ನರಿಯನ್ನು) ಬೇಟೆಯಾಡು; ಬೆನ್ನಟ್ಟು; ಶಿಕಾರಿಮಾಡು.
  2. (ಆಹಾರಕ್ಕಾಗಿ ಯಾ ಕ್ರೀಡೆಗಾಗಿ ಕಾಡುಪ್ರಾಣಿಗಳನ್ನು) ಬೇಟೆಯಾಡು; ಬೇಟೆಮಾಡು; ಶಿಕಾರಿಮಾಡು.
  3. (ಪ್ರಾಣಿಗಳ ವಿಷಯದಲ್ಲಿತನಗೆ ಆಹಾರವಾಗಿರುವ ಪ್ರಾಣಿಯನ್ನು) ಬೇಟೆಯಾಡು; ಬೆನ್ನಟ್ಟು.
  4. ಬೆನ್ನಟ್ಟಿ (ಸ್ಥಳ ಮೊದಲಾದವುಗಳಿಂದ) ಓಡಿಸಿಬಿಡು, ಅಟ್ಟಿಬಿಡು.
  5. ಬೇಟೆ(ಪ್ರಾಣಿ)ಗಾಗಿ ಪ್ರದೇಶವೊಂದನ್ನು – ಸೋಸು, ಶೋಧಿಸು, ಹುಡುಕಾಡು.
  6. ಬೇಟೆಯಲ್ಲಿ (ಕುದುರೆ, ಬೇಟೆನಾಯಿಗಳನ್ನು) ಬಳಸು.
  7. (ಅಮೆರಿಕನ್‍ ಪ್ರಯೋಗ) (ಬೇಟೆಪ್ರಾಣಿಯನ್ನು) ಗುಂಡಿನಿಂದ, ಬಂದೂಕಿನಿಂದ ಹೊಡೆ.
  8. (ಘಂಟಾವಾದನದಲ್ಲಿ, ಆವರ್ತನಗಳನ್ನು ಬದಲಾಯಿಸುವಾಗ ಘಂಟೆಯ) ಸ್ಥಾನವನ್ನು ಬದಲಾಯಿಸು: hunt up ಮೇಲ್ತುದಿಗೆ ಒಯ್ಯು. hunt down ಸ್ವಸ್ಥಾನಕ್ಕೆ ತರು.
ಅಕರ್ಮಕ ಕ್ರಿಯಾಪದ
  1. (ನರಿ) ಯಾ ಕಾಡುಪ್ರಾಣಿಗಳನ್ನು ಬೇಟೆಯಾಡು; ಬೆನ್ನಟ್ಟು; ಶಿಕಾರಿಮಾಡು.
  2. (ಪ್ರಾಣಿಯ ವಿಷಯದಲ್ಲಿತನಗೆ ಆಹಾರವಾಗಿರುವ ಪ್ರಾಣಿಯನ್ನು) ಬೇಟೆಯಾಡು.
  3. (ಯಾವುದನ್ನೇ) ಹುಡುಕಿಕೊಂಡು ಹೋಗು; ಅರಸು; ಅನ್ವೇಷಿಸು.
  4. ತೂಗಾಡು; ಮೇಲಕ್ಕೂ ಕೆಳಕ್ಕೂ ಚಲಿಸು.
  5. (ಎಂಜಿನ್‍ ಮೊದಲಾದವುಗಳ ವಿಷಯದಲ್ಲಿ) ಪರ್ಯಾಯಕ್ರಮದಲ್ಲಿ ಅತಿವೇಗವಾಗಿ ಮತ್ತು ಅತಿನಿಧಾನವಾಗಿ ಓಡು.
ಪದಗುಚ್ಛ
  1. hunt down:
    1. (ಬೇಟೆಯ ಪ್ರಾಣಿಯನ್ನು ತಪ್ಪಿಸಿಕೊಳ್ಳಲಾಗದಂಥ) ಇಕ್ಕಟ್ಟಿನಲ್ಲಿ ಯಾ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಕ್ಕಿಸು .
    2. ಹುಡುಕಿ, ಬೆನ್ನಟ್ಟಿ – ಹಿಡಿ; ಹಿಡಿದು ಹಾಕು: hunt down an escaped prisoner ತಪ್ಪಿಸಿಕೊಂಡು ಓಡಿಹೋದ ಕೈದಿಯನ್ನು ಹುಡುಕಿ ಹಿಡಿದು ಹಾಕು.
  2. hunt for (ಯಾವುದೇ ಒಂದನ್ನು) ಹುಡುಕು; ಹುಡುಕಿ ಪಡೆಯಲು ಪ್ರಯತ್ನಿಸು: hunt for a lost coat ಕಳೆದುಹೋದ ಕೋಟನ್ನು ಹುಡುಕು.
  3. hunt high and low ಎಲ್ಲ ಕಡೆಯಲ್ಲೂ ಹುಡುಕು.
  4. hunt out ಶೋಧಿಸು; ತಲಾಷ್‍ ಮಾಡು; ಜಾಡಿನಿಂದ ಪತ್ತೆಹಚ್ಚು; ಜಾಡು ಹಿಡಿದು ಕಂಡುಹಿಡಿ; ಹುಡುಕಿ ಕಂಡುಹಿಡಿ; ಪತ್ತೆಮಾಡು.
  5. hunt the hare, slipper, squirrel, thimble ಮೊಲದ, ಜೋಡಿನ, ಅಳಿಲಿನ, ಹೆಬ್ಬೆಟ್ಟು ಮುಸುಕಿನ – ಬೇಟೆ, ಹುಡುಕಾಟ, ಬೆನ್ನಟ್ಟಿ ಹಿಡಿಯುವ ಆಟ.
  6. hunt up ಹುಡುಕಿ ಪತ್ತೆಮಾಡು, ಕಂಡು ಹಿಡಿ: hunt up old records ಹಳೆಯ ದಾಖಲೆಗಳನ್ನು ಹುಡುಕಿ ಪತ್ತೆಹಚ್ಚು.
See also 1hunt
2hunt ಹಂಟ್‍
ನಾಮವಾಚಕ
  1. ಬೇಟೆ; ಶಿಕಾರಿ.
  2. (ರೂಪಕವಾಗಿ) ಬೇಟೆ; ಹುಡುಕುವಿಕೆ; ಅರಸುವಿಕೆ; ತಲಾಶ್‍; ಅನ್ವೇಷಣೆ; ಶೋಧ; ಶೋಧನೆ.
  3. (ಬೇಟೆ ನಾಯಿಗಳ ನೆರವಿನಿಂದ ಬೇಟೆಯಾಡುವ) ಶಿಕಾರಿಗಳ ತಂಡ; ಬೇಟೆಗಾರರ ತಂಡ; ಗಯಾವಿಹಾರಿಗಳ ತಂಡ.
  4. ಬೇಟೆ – ಪ್ರಾಂತ, ಪ್ರದೇಶ.
  5. ಓಲಾಟ; ಆಂದೋಲನ; ತೂಗಾಟ; ಒಂದು ತುದಿಯಿಂದ ಮತ್ತೊಂದು ತುದಿಗೆ ಚಲಿಸುವುದು.