See also 2hum  3hum  4hum
1hum ಹಮ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ hummed, ವರ್ತಮಾನ ಕೃದಂತ humming.) ಸಕರ್ಮಕ ಕ್ರಿಯಾಪದ ಗುಂಯ್‍ಗುಡು; ಗುಂಯ್‍ಗುಟ್ಟುತ್ತ ಹೇಳು, ಉಚ್ಚರಿಸು ಯಾ ಹಾಡು.

ಅಕರ್ಮಕ ಕ್ರಿಯಾಪದ
  1. (ಜೇನುನೊಣ, ತಿರುಗುತ್ತಿರುವ ಬುಗುರಿ, ಮೊದಲಾದವುಗಳಂತೆ) ಮೊರೆ; ಗುಂಯ್‍ ಗುಡು; ಝೇಂಕರಿಸು
  2. (ಮುಖ್ಯವಾಗಿ ಹಿಂದು ಮುಂದು ನೋಡುವ ಮನಃಸ್ಥಿತಿಯಲ್ಲಿ) ಗುಂಯ್‍ಗುಟ್ಟು; ಮೆಲ್ಲನೆ ಅಸ್ಪಷ್ಟ ಧ್ವನಿಮಾಡು
  3. ಮೂಗಿನಲ್ಲಿ ಹಾಡು; ತುಟಿಬಿಚ್ಚದೆ ಹಾಡು
  4. (ಆಡುಮಾತು) ಭರದ ಚಟುವಟಿಕೆಗಳಲ್ಲಿ ತೊಡಗಿರು; ಚಚ್ಚರದಿಂದಿರು; ಚಟುವಟಿಕೆಯಲ್ಲಿರು; ಚುರುಕಾಗಿ ಕೆಲಸ ಮಾಡುತ್ತಿರು: make things hum ಎಲ್ಲ ಕೆಲಸಗಳೂ ಚುರುಕಿನಿಂದ, ಭರದಿಂದ, ಸಾಗುವಂತೆ ಮಾಡು
  5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ನಾರು; ನಾತ ಹೊಡೆ; ದುರ್ವಾಸನೆ ಹೊಡೆ; ಕೆಟ್ಟನಾತ ಬೀರು.
ಪದಗುಚ್ಛ

hum and haw (or ha) (ಮುಖ್ಯವಾಗಿ ಅನಿಶ್ಚಿತತೆ ಸೂಚಿಸಲು) ‘ಹಾಹೂಂ’ ಎಂದು ರಾಗ ಎಳೆ; ‘ಹಮ್‍ ಹಾ’ ಎನ್ನು.

See also 1hum  3hum  4hum
2hum ಹಮ್‍
ನಾಮವಾಚಕ
  1. (ಅನಿಶ್ಚಯ, ಮೆಚ್ಚುಗೆ, ಶ್ಲಾಘನೆ, ಆಶ್ಚರ್ಯ, ಮೊದಲಾದವುಗಳನ್ನು ಸೂಚಿಸುವ) ಹಮ್‍!
  2. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ನಾತ; ದುರ್ವಾಸನೆ.
  3. (ಆಂಪ್ಲಿಹೈಯರ್‍ ಮೊದಲಾದವುಗಳಲ್ಲಿ ವಿದ್ಯುತ್ಸಂಚಾರದ ವ್ಯತ್ಯಾಸದಿಂದಾಗಿ ಉಂಟಾಗುವ, ಕಡಿಮೆ ಆವರ್ತದ) ಹಮ್‍ ಎಂಬ ಅನಪೇಕ್ಷಣೀಯವಾದ ಶಬ್ದ.
ಪದಗುಚ್ಛ

hums and haws (or ha’s) (ಮುಖ್ಯವಾಗಿ ಅನಿಶ್ಚಿತತೆಯನ್ನು ಸೂಚಿಸುವ) ಹುಹಾಗಳು.

See also 1hum  2hum  4hum
3hum ಹಮ್‍
ಭಾವಸೂಚಕ ಅವ್ಯಯ

(ಅನಿಶ್ಚಯ, ಅಸಮ್ಮತಿ, ಮೊದಲಾದವನ್ನು ಸೂಚಿಸುವ) ಹಮ್‍! (ಎಂಬ ಶಬ್ದ).

See also 1hum  2hum  3hum
4hum ಹಮ್‍
ನಾಮವಾಚಕ

(ಅಶಿಷ್ಟ) ಕಪಟ; ಮೋಸ; ವಿಶ್ವಾಸದ್ರೋಹ ನಂಬಿಸಿಮಾಡಿದ ವಂಚನೆ (humbug ಎಂಬುದರ ಸಂಕ್ಷಿಪ್ತ).