See also 2host  3host  4host
1host ಹೋಸ್ಟ್‍
ನಾಮವಾಚಕ
  1. ಹೆಚ್ಚುಸಂಖ್ಯೆ; ದೊಡ್ಡ ಗುಂಪು; ನೆರವಿ; ಸಮೂಹ.
  2. (ಪ್ರಾಚೀನ ಪ್ರಯೋಗ) ಸೈನ್ಯ; ದಂಡು.
ಪದಗುಚ್ಛ
  1. heavenly host = ಪದಗುಚ್ಛ \((2)\).
  2. host(s) of heaven:
    1. ದೇವದೂತರು.
    2. ಸೂರ್ಯ, ಚಂದ್ರ ಮತ್ತು ತಾರೆಗಳು
  3. Lord (or God) of hosts (ಬೈಬ್‍ಲ್‍) ದೇವ ಸೇನಾಧಿಪತಿ; ದೇವರು.
ನುಡಿಗಟ್ಟು

person is a host in himself ಅನೇಕರ ಕೆಲಸವನ್ನು ತಾನೊಬ್ಬನೇ ಮಾಡಬಲ್ಲನು; ಬಹುಕಾರ್ಯನಿರ್ವಾಹಕ; ಅನೇಕ ಕಾರ್ಯನಿರ್ವಾಹಕ.

See also 1host  3host  4host
2host ಹೋಸ್ಟ್‍
ನಾಮವಾಚಕ
  1. ಆತಿಥೇಯ; ಆತಿಥ್ಯಕಾರ; ಅತಿಥಿಗಳಿಗೆ ಮನೆಯಲ್ಲಿ ಎಡೆಗೊಟ್ಟು ಸತ್ಕರಿಸುವವನು.
  2. ಪಥಿಕಗೃಹದ ಯಜಮಾನ; ಪ್ರಯಾಣಿಕರಿಗೆ ಊಟ ವಸತಿ ಮೊದಲಾದವನ್ನು ಒದಗಿಸುವ ಗೃಹದ ಯಜಮಾನ.
  3. (ಜೀವವಿಜ್ಞಾನ) ಆತಿಥೇಯ; ಆಶ್ರಯದಾತ; ಪರಪೋಷಿ; ಪರೋಪಜೀವಿಯೊಂದಿಗೆ ತನ್ನ ರಕ್ತ ಯಾ ಸಾರವನ್ನು ಆಹಾರವಾಗಿ ಒದಗಿಸಿ ಆಶ್ರಯ ನೀಡುವ ಪ್ರಾಣಿ ಯಾ ಸಸ್ಯ.
  4. ಆತಿಥೇಯ; ಬೇರೊಬ್ಬನಿಂದ, ಬೇರೊಬ್ಬ ಪ್ರಾಣಿಯಿಂದ ಅವಯವವನ್ನು ನಾಟಿ ಹಾಕಿಸಿಕೊಳ್ಳುವ ವ್ಯಕ್ತಿ ಯಾ ಪ್ರಾಣಿ.
ನುಡಿಗಟ್ಟು

reckon without one’s host

  1. ಸಂಬಂಧಪಟ್ಟ ಪ್ರಮುಖ ವ್ಯಕ್ತಿಯೊಡನೆ ಸಮಾಲೋಚಿಸದೆ, ಅವನನ್ನು ಕೇಳದೆ (ಕಾರ್ಯಕ್ರಮ, ಯೋಜನೆ, ಮೊದಲಾದವನ್ನು) – ಕೈಗೊಳ್ಳು, ರೂಪಿಸು, ತೀರ್ಮಾನಿಸು.
  2. (ಕೈಗೊಳ್ಳುವ ಕಾರ್ಯದಲ್ಲಿ) ಒದಗಬಹುದಾದ ಅಡ್ಡಿ ಆತಂಕ, ವಿರೋಧ, ಮೊದಲಾದವನ್ನು ಕಡೆಗಣಿಸು, ಉಪೇಕ್ಷಿಸು.
See also 1host  2host  4host
3host ಹೋಸ್ಟ್‍
ನಾಮವಾಚಕ

(ಕ್ರೈಸ್ತಧರ್ಮ) ದಿವ್ಯಪ್ರಸಾದ; ಪ್ರಭುಭೋಜನದಲ್ಲಿ ಭಕ್ತವೃಂದಕ್ಕೆ ವಿನಿಯೋಗಿಸುವ ಬ್ರೆಡ್ಡು, ರೊಟ್ಟಿ.

See also 1host  2host  3host
4host ಹೋಸ್ಟ್‍
ಸಕರ್ಮಕ ಕ್ರಿಯಾಪದ

(ಊಟ, ಕೂಟ, ಮೊದಲಾದವಲ್ಲಿ) ಆತಿಥೇಯನಾಗು; ಆತಿಥ್ಯ ನೀಡು; ಊಟೋಪಚಾರ ಏರ್ಪಡಿಸು; ಸತ್ಕಾರ ನಡೆಸು: he hosted a reception for the new members ಹೊಸ ಸದಸ್ಯರಿಗಾಗಿ ಅವನು ಒಂದು ಸಂತೋಷಕೂಟ ಏರ್ಪಡಿಸಿದ.