See also 2hope
1hope ಹೋಪ್‍
ನಾಮವಾಚಕ
  1. (ಏಕವಚನ ಯಾ ಬಹುವಚನದಲ್ಲಿ) ಭರವಸೆ; ನಂಬಿಕೆ; ವಿಶ್ವಾಸ.
  2. ನಿರೀಕ್ಷೆ; ಮನೋರಥ; ಯಾವುದೇ ವಿಷಯದ ಯಾ ಕಾರ್ಯದ ವಿಷಯದಲ್ಲಿ, ನಿರೀಕ್ಷಣೆಯಿಂದ ಕೂಡಿದ ಆಸೆ, ಅಭಿಲಾಷೆ.
  3. (ಬೈಬ್‍ಲ್‍) ಶ್ರದ್ಧೆ; ವಿಶ್ವಾಸ.
  4. ಹಾರೈಕೆ.
  5. ಸಂಭವ.
  6. ಆಸೆಯ ನೆಲೆ; ಆಸೆ, ಭರವಸೆಗಳಿಗೆ ಆಧಾರವಾಗಿರುವ ವ್ಯಕ್ತಿ, ವಸ್ತು.
  7. ನಿರೀಕ್ಷೆ; ನಿರೀಕ್ಷಿತವಾದದ್ದು.
ಪದಗುಚ್ಛ
  1. hold our little hope = ಪದಗುಚ್ಛ \((3)\).
  2. hold out no hope ಸ್ವಲ್ಪವೂ ಭರವಸೆ ಕೊಡದಿರು.
  3. hold out not much hope ಹೆಚ್ಚೇನೂ ಭರವಸೆ ಕೊಡದಿರು.
  4. hold out some hope ಸ್ವಲ್ಪ ಪ್ರೋತ್ಸಾಹ ಯಾ ಭರವಸೆ ಕೊಡು; ಸ್ವಲ್ಪ ನಿರೀಕ್ಷೆ, ಆಸೆ – ಹುಟ್ಟಿಸು.
ನುಡಿಗಟ್ಟು
  1. beyond hope ಯಶಸ್ಸಿನ ನಿರೀಕ್ಷೆಯೇ ಇಲ್ಲದ; ಯಶಸ್ಸಿನ ಸಾಧ್ಯತೆಯೇ ಇಲ್ಲದ.
  2. hoping against hope ಬಯಲಾಸೆ ನೆಚ್ಚಿಕೊಂಡು; ಕೇವಲ ಊಹೆಗೆ ಅಂಟಿಕೊಂಡು; ಕೇವಲ ಸಾಧ್ಯತೆಯನ್ನು ನಂಬಿಕೊಂಡು.
  3. not a hope (ವ್ಯಂಗ್ಯವಾಗಿ) ಏನೇನೂ ಆಶೆಯಿಲ್ಲ.
  4. past hope = ನುಡಿಗಟ್ಟು \((1)\).
  5. raise hopes (ಉತ್ತಮ ಸ್ಥಿತಿ ಮೊದಲಾದವುಗಳ) ಆಸೆ ಎಬ್ಬಿಸು; ನಿರೀಕ್ಷೆ ಹುಟ್ಟಿಸು; (ಅವುಗಳನ್ನು ಗಳಿಸಲು) ಪ್ರೋತ್ಸಾಹ ನೀಡು.
  6. some hopes! (ಆಡುಮಾತು) ಸ್ವಲ್ಪವೂ, ಏನೇನೂ – ಆಶೆ ಇಲ್ಲ!
See also 1hope
2hope ಹೋಪ್‍
ಸಕರ್ಮಕ ಕ್ರಿಯಾಪದ
  1. ಭರವಸೆಯಿಂದಿರು; ನಂಬು; ಹಾರೈಸು: I hope (that) you will succeed ನೀನು ಜಯಶಾಲಿಯಾಗುವೆಯೆಂದು ನಂಬಿದ್ದೇನೆ.
  2. (ಮಾಡಲು) ಆಸೆಯಿಂದಿರು; ಆಸೆಯಿಂದ – ಎದುರು ನೋಡು, ನಿರೀಕ್ಷಿಸು.
ಅಕರ್ಮಕ ಕ್ರಿಯಾಪದ

(ಅಭಿಲಾಷೆಯೊಡನೆ) ನಿರೀಕ್ಷಿಸು; ಎದುರು ನೋಡು: hope for success ಆಸೆಯಿಂದ ಜಯವನ್ನು ನಿರೀಕ್ಷಿಸು.