1hope
ಹೋಪ್
ನಾಮವಾಚಕ
- (ಏಕವಚನ ಯಾ ಬಹುವಚನದಲ್ಲಿ) ಭರವಸೆ; ನಂಬಿಕೆ; ವಿಶ್ವಾಸ.
- ನಿರೀಕ್ಷೆ; ಮನೋರಥ; ಯಾವುದೇ ವಿಷಯದ ಯಾ ಕಾರ್ಯದ ವಿಷಯದಲ್ಲಿ, ನಿರೀಕ್ಷಣೆಯಿಂದ ಕೂಡಿದ ಆಸೆ, ಅಭಿಲಾಷೆ.
- (ಬೈಬ್ಲ್) ಶ್ರದ್ಧೆ; ವಿಶ್ವಾಸ.
- ಹಾರೈಕೆ.
- ಸಂಭವ.
- ಆಸೆಯ ನೆಲೆ; ಆಸೆ, ಭರವಸೆಗಳಿಗೆ ಆಧಾರವಾಗಿರುವ ವ್ಯಕ್ತಿ, ವಸ್ತು.
- ನಿರೀಕ್ಷೆ; ನಿರೀಕ್ಷಿತವಾದದ್ದು.
ಪದಗುಚ್ಛ
- hold our little hope = ಪದಗುಚ್ಛ \((3)\).
- hold out no hope ಸ್ವಲ್ಪವೂ ಭರವಸೆ ಕೊಡದಿರು.
- hold out not much hope ಹೆಚ್ಚೇನೂ ಭರವಸೆ ಕೊಡದಿರು.
- hold out some hope ಸ್ವಲ್ಪ ಪ್ರೋತ್ಸಾಹ ಯಾ ಭರವಸೆ ಕೊಡು; ಸ್ವಲ್ಪ ನಿರೀಕ್ಷೆ, ಆಸೆ – ಹುಟ್ಟಿಸು.
ನುಡಿಗಟ್ಟು
- beyond hope ಯಶಸ್ಸಿನ ನಿರೀಕ್ಷೆಯೇ ಇಲ್ಲದ; ಯಶಸ್ಸಿನ ಸಾಧ್ಯತೆಯೇ ಇಲ್ಲದ.
- hoping against hope ಬಯಲಾಸೆ ನೆಚ್ಚಿಕೊಂಡು; ಕೇವಲ ಊಹೆಗೆ ಅಂಟಿಕೊಂಡು; ಕೇವಲ ಸಾಧ್ಯತೆಯನ್ನು ನಂಬಿಕೊಂಡು.
- not a hope (ವ್ಯಂಗ್ಯವಾಗಿ) ಏನೇನೂ ಆಶೆಯಿಲ್ಲ.
- past hope = ನುಡಿಗಟ್ಟು \((1)\).
- raise hopes (ಉತ್ತಮ ಸ್ಥಿತಿ ಮೊದಲಾದವುಗಳ) ಆಸೆ ಎಬ್ಬಿಸು; ನಿರೀಕ್ಷೆ ಹುಟ್ಟಿಸು; (ಅವುಗಳನ್ನು ಗಳಿಸಲು) ಪ್ರೋತ್ಸಾಹ ನೀಡು.
- some hopes! (ಆಡುಮಾತು) ಸ್ವಲ್ಪವೂ, ಏನೇನೂ – ಆಶೆ ಇಲ್ಲ!