See also 2hood  3hood
1hood ಹುಡ್‍
ನಾಮವಾಚಕ
  1. (ನಿಲುವಂಗಿ ಮೊದಲಾದವುಗಳ ಭಾಗವಾಗಿ ಆಗಲಿ, ಪ್ರತ್ಯೇಕವಾಗಿ ಆಗಲಿ, ತಲೆಯನ್ನು, ಕತ್ತನ್ನು ಮುಚ್ಚುವ) ಗವುಸು; ಗೊಂಗಡಿ; ಮುಡಿಗೆ; ಕುಂಚಿಗೆ.
  2. (ವಿಶ್ವವಿದ್ಯಾನಿಲಯ) ಹುಡ್‍; ಪದವಿ (ಸೂಚಕ) ಲಾಂಛನ; ಪದವಿಯ ಸೂಚನೆಯಾಗಿ ತಲೆಯ ಮೇಲೆ ಧರಿಸುವ ಮುಸುಕಿನಂಥ ವಸ್ತ್ರ.
  3. (ಡೇಗೆಯ ತಲೆಗಿಡುವ) ತೊಗಲಿನ ಮುಸುಕು.
  4. (ಅಮೆರಿಕನ್‍ ಪ್ರಯೋಗ) ಮೋಟಾರು ಕಾರಿನ ಬಾನೆಟ್ಟು; ಎಂಜಿನಿನ ಮುಚ್ಚಳ.
  5. (ಬ್ರಿಟಿಷ್‍ ಪ್ರಯೋಗ) ಹುಡ್‍; ಮೋಟಾರ್‍ ಕಾರು, ಮಕ್ಕಳ ಬಂಡಿ, ಮೊದಲಾದವುಗಳ ಮೇಲೆ ಹಾಕಿರುವ, ಮುಚ್ಚಬಹುದಾದ, ತೆರೆಯಬಹುದಾದ ಜಲನಿರೋಧಕ ಗವುಸು.
  6. (ಯಂತ್ರಗಳನ್ನು ಬಳಸುವವನ) ತಲೆಗವುಸು; ಮುಸುಕು.
  7. ಹೊಗೆ ಮೊದಲಾದವುಗಳನ್ನು ತೊಲಗಿಸಲು ಬಳಸುವ ಮುಸುಕು.
  8. (ಹಾವು, ನೀರುನಾಯಿ, ಮೊದಲಾದವುಗಳ) ಹೆಡೆ; ಮುಸುಕಿನಂಥ ಅಂಗ.
See also 1hood  3hood
2hood ಹುಡ್‍
ಸಕರ್ಮಕ ಕ್ರಿಯಾಪದ
  1. ಹೆಡೆಯುಡಿಗೆ ಹಾಕು.
  2. ಗವುಸು ಹೊದಿಸು; ಮುಸುಕು ಕವಿಸು.
See also 1hood  2hood
3hood ಹು(ಹೂ)ಡ್‍
ನಾಮವಾಚಕ

(ಅಶಿಷ್ಟ) ಡಕಾಯಿತ; ದರೋಡೆಗಾರ; ಕಳ್ಳಕಾಕರ,ಡಕಾಯಿತರ ದಳಕ್ಕೆ ಸೇರಿದವನು.

  1. (ಕಾವಲಿಗಾಗಿ ನೇಮಕ ಮಾಡಿಕೊಳ್ಳುವ) ಬಂದೂಕುಧಾರಿ.