1hood
ಹುಡ್
ನಾಮವಾಚಕ
- (ನಿಲುವಂಗಿ ಮೊದಲಾದವುಗಳ ಭಾಗವಾಗಿ ಆಗಲಿ, ಪ್ರತ್ಯೇಕವಾಗಿ ಆಗಲಿ, ತಲೆಯನ್ನು, ಕತ್ತನ್ನು ಮುಚ್ಚುವ) ಗವುಸು; ಗೊಂಗಡಿ; ಮುಡಿಗೆ; ಕುಂಚಿಗೆ.
- (ವಿಶ್ವವಿದ್ಯಾನಿಲಯ) ಹುಡ್; ಪದವಿ (ಸೂಚಕ) ಲಾಂಛನ; ಪದವಿಯ ಸೂಚನೆಯಾಗಿ ತಲೆಯ ಮೇಲೆ ಧರಿಸುವ ಮುಸುಕಿನಂಥ ವಸ್ತ್ರ.
- (ಡೇಗೆಯ ತಲೆಗಿಡುವ) ತೊಗಲಿನ ಮುಸುಕು.
- (ಅಮೆರಿಕನ್ ಪ್ರಯೋಗ) ಮೋಟಾರು ಕಾರಿನ ಬಾನೆಟ್ಟು; ಎಂಜಿನಿನ ಮುಚ್ಚಳ.
- (ಬ್ರಿಟಿಷ್ ಪ್ರಯೋಗ) ಹುಡ್; ಮೋಟಾರ್ ಕಾರು, ಮಕ್ಕಳ ಬಂಡಿ, ಮೊದಲಾದವುಗಳ ಮೇಲೆ ಹಾಕಿರುವ, ಮುಚ್ಚಬಹುದಾದ, ತೆರೆಯಬಹುದಾದ ಜಲನಿರೋಧಕ ಗವುಸು.
- (ಯಂತ್ರಗಳನ್ನು ಬಳಸುವವನ) ತಲೆಗವುಸು; ಮುಸುಕು.
- ಹೊಗೆ ಮೊದಲಾದವುಗಳನ್ನು ತೊಲಗಿಸಲು ಬಳಸುವ ಮುಸುಕು.
- (ಹಾವು, ನೀರುನಾಯಿ, ಮೊದಲಾದವುಗಳ) ಹೆಡೆ; ಮುಸುಕಿನಂಥ ಅಂಗ.