honourable ಆನರಬ್‍ಲ್‍
ಗುಣವಾಚಕ
  1. ಗೌರವಾರ್ಹ; ಮಾನ್ಯ.
  2. ಗೌರವ ತರುವ; ಕೀರ್ತಿ ತರುವ.
  3. ಗೌರವದ; ಮರ್ಯಾದೆಯ; ಗೌರವೋಚಿತ; ಗೌರವಕ್ಕೆ ತಕ್ಕ; ಮರ್ಯಾದೆಗೆ ಅನುಗುಣವಾಗಿರುವ: honourable conduct ಮರ್ಯಾದೆಯ ನಡತೆhonourable peace ಗೌರವೋಚಿತ ಶಾಂತಿ(ಸಂಧಾನ).
  4. ಋಜು; ಪ್ರಾಮಾಣಿಕ.
  5. (ಹೆಂಗಸಿನೊಡನೆ ಪ್ರಣಯದ ವಿಷಯದಲ್ಲಿ) ಗೌರವದಿಂದ ಕೂಡಿದ: his intensions are honourable ಅವನ ಉದ್ದೇಶಗಳು ಗೌರವದಿಂದ ಕೂಡಿವೆ (ಅವಳನ್ನು ಮದುವೆಯಾಗುವುದು ಅವನ ಉದ್ದೇಶ).
  6. (ಅರ್ಲ್‍ಗಳ ಕಿರಿಯ ಗಂಡುಮಕ್ಕಳು, ವೈಕೌಂಟ್‍ಗಳ ಮಕ್ಕಳು, ಬ್ಯಾರನ್‍ಗಳ ಮಕ್ಕಳು, ಮೇಡ್‍ಸ್‍ ಆಹ್‍ ಆನರ್‍ ಬಿರುದುಳ್ಳವರು, ಉನ್ನತ ಬಿರುದಿಲ್ಲದ ಹೈಕೋರ್ಟ್‍ ನ್ಯಾಯಮೂರ್ತಿಗಳು, ಲಾರ್ಡ್‍ ಆಹ್‍ ಸೆಷನ್‍ ಬಿರುದಾಂಕಿತರು, ಮಂತ್ರಿಗಳು, ಡೋಮಿನಿಯನ್‍ಗಳಲ್ಲೂ ಕಾಲೊನಿಗಳಲ್ಲೂ ಇರುವ ಜಡ್ಜಿಗಳು, ಪಾರ್ಲಿಮೆಂಟಿನ ಸದಸ್ಯರು, ಅಮೆರಿಕದಲ್ಲಿ ಕಾಂಗ್ರೆಸ್ಸಿನ ಸದಸ್ಯರು, ಸಂಪುಟದ ಸಚಿವರು, ಜಡ್ಜಿಗಳು, ಮೊದಲಾದವರ ಘನತೆ ಯಾ ಪ್ರಾಮುಖ್ಯವನ್ನು ಸೂಚಿಸುವ ಉಪಾಧಿ ಯಾ ಬಿರುದಾಗಿ) ಸನ್ಮಾನ್ಯ; ಘನತೆವೆತ್ತ; ಗೌರವಾನ್ವಿತ.
ಪದಗುಚ್ಛ
  1. honourable $^2$mention.
  2. Most Honourable (ಬ್ರಿಟಿಷ್‍ ಪ್ರಯೋಗ) (ಮಾರ್ಕ್ವಿಸ್ಟ್‍ಗಳು, ಪ್ರಿವಿ ಕೌನ್ಸಿಲ್‍ ಮತ್ತು ಆರ್ಡರ್‍ ಆಹ್‍ ಬಾತ್‍ ಇವುಗಳ) ಮೋಸ್ಟ್‍ ಆನರಬ್‍ಲ್‍ ಬಿರುದು.
  3. Right Honourable (ಬ್ರಿಟಿಷ್‍ ಪ್ರಯೋಗ) (ಅರ್ಲ್‍ಗಳು, ವೈಕೌಂಟ್‍ಗಳು, ಬ್ಯಾರನ್‍ಗಳೂ, ಪ್ರಿವಿ ಕೌನ್ಸೆಲರ್‍ಗಳು, ಲಾರ್ಡ್‍ (ಜಸ್ಟಿಸಸ್‍) ಆಹ್‍ ಅಪೀಲ್‍, ಲಾರ್ಡ್‍ ಮೇಯರ್‍ ಆಹ್‍ ಲಂಡನ್‍, ಯಾರ್ಕ್‍ ಯಾ ಬೆಲ್‍ ಹಾಸ್ಟ್‍, ಲಾರ್ಡ್‍ ಪ್ರವೋಸ್ಟ್‍ ಆಹ್‍ ಎಡಿನ್‍ಬರೊ ಯಾ ಗ್ಲಾಸ್ಗೊ, ಮೊದಲಾದವರ) ರೈಟ್‍ ಆನರಬ್‍ಲ್‍ ಬಿರುದು.