See also 2hoe
1hoe ಹೋ
ನಾಮವಾಚಕ

ಸಲಿಕೆ; ಕಳೆಗುದ್ದಲಿ; ಎಲಕೋಟು; ಎಲೆಗುದ್ದಲಿ; ಮಣ್ಣನ್ನು ಸಡಿಲಿಸುವುದು, ಕಳೆ ಕೀಳುವುದು, ಮೊದಲಾದವುಗಳಿಗೆ ಬಳಸುವ, ಉದ್ದವಾದ ಕಾವಿಗೆ ಅಗಲವಾದ ಲೋಹದ ತಗಡನ್ನು ಜೋಡಿಸಿದ ಮುಟ್ಟು.

ಪದಗುಚ್ಛ

Dutch hoe ನೂಕು – ಗುದ್ದಲಿ, ಎಲಕೋಟು; (ಬಳಸುವವನು) ನೂಕಿಕೊಂಡು ಹೋಗುವ ಕಳೆಗುದ್ದಲಿ.

See also 1hoe
2hoe ಹೋ
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ hoeing, ಭೂತರೂಪ ಮತ್ತು ಭೂತಕೃದಂತ hoed)
  1. ಪೈರಿನ ಕಳೆಕೀಳು.
  2. (ಕಳೆಗುದ್ದಲಿ ಯಾ ಎಲಕೋಟಿನಿಂದ)
    1. ಮಣ್ಣು – ಸಡಿಲಿಸು, ಅಗೆ.
    2. ಕಳೆ – ಕಡಿದುಹಾಕು, ಕತ್ತರಿಸು.
ಅಕರ್ಮಕ ಕ್ರಿಯಾಪದ

ಕಳೆಗುದ್ದಲಿಯಿಂದ ಕೆಲಸಮಾಡು, ಅಗೆ ಯಾ ಕಳೆ ಕತ್ತರಿಸು; ಎಲಕೋಟು ಬಳಸು.

ನುಡಿಗಟ್ಟು