See also 2hive
1hive ಹೈವ್‍
ನಾಮವಾಚಕ
  1. ಜೇನುಗೂಡು; ಜೇನು ಹುಟ್ಟು; ಜೇನುಹಟ್ಟಿ.
  2. (ರೂಪಕವಾಗಿ) ಜನಸಂದಣಿ ಪ್ರದೇಶ; ಜೇನುಗೂಡು; ಜನರ ಸಂದಣಿ ಹೆಚ್ಚಾಗಿದ್ದು ಚಲನವಲನಗಳು, ಕೆಲಸಕಾರ್ಯಗಳು ಭರಾಟೆಯಿಂದ ನಡೆಯುವ ಯಾವುದೇ ಸ್ಥಳ.
  3. ತುಂಬು ಜೇನುಗೂಡು; (ಜೇನು)ಹುಳು ತುಂಬಿದ ಜೇನುಗೂಡು.
  4. (ರಭಸದಿಂದ ಓಡಾಡುವ ಕಿಕ್ಕಿರಿದ) ಜನಸಂದಣಿ.
  5. ಜೇನುಗೂಡು; ಜೇನುಗೂಡಿನ ಆಕಾರದ ವಸ್ತು.
See also 1hive
2hive ಹೈವ್‍
ಸಕರ್ಮಕ ಕ್ರಿಯಾಪದ
  1. ಜೇನುನೊಣಗಳನ್ನು ಗೂಡಿನಲ್ಲಿ – ಒಟ್ಟುಗೂಡಿಸು, ಕಲೆಹಾಕು, ಸೇರಿಸು.
  2. (ಜನರು ಮೊದಲಾದವರನ್ನು) ಅನುಕೂಲವಾದ, ಅಚ್ಚುಕಟ್ಟಾದ — ಬಿಡಾರದಲ್ಲಿಳಿಸು.
  3. ಕೂಡಹಾಕು; ಕೂಡಿಡು; ಸಂಗ್ರಹಿಸು; ಜಮಾಯಿಸು.
ಅಕರ್ಮಕ ಕ್ರಿಯಾಪದ
  1. (ಜೇನುನೊಣಗಳು) ಗೂಡು – ಸೇರು, ಹೋಗು.
  2. (ಜೇನುನೊಣಗಳಂತೆ) ಒಟ್ಟಿಗೆ – ಇರು, ವಾಸಿಸು.
ಪದಗುಚ್ಛ

hive off:

  1. (ಜೇನುನೊಣಗಳಂತೆ) ಗುಂಪುಗಳಾಗಿ ಹೊರಡು, ಹೊರಟುಹೋಗು.
  2. (ರೂಪಕವಾಗಿ) (ಕೈಗಾರಿಕಾ ಸಂಸ್ಥೆಯ ವಿಷಯದಲ್ಲಿ) ಉಪಸಂಸ್ಥೆಗೆ ಕೆಲವು ಸರಕುಗಳನ್ನು ತಯಾರಿಸಲು – ಹಂಚಿಕೊಡು, ವಹಿಸು, ಗೊತ್ತುಮಾಡು.