2hive
ಹೈವ್
ಸಕರ್ಮಕ ಕ್ರಿಯಾಪದ
- ಜೇನುನೊಣಗಳನ್ನು ಗೂಡಿನಲ್ಲಿ – ಒಟ್ಟುಗೂಡಿಸು, ಕಲೆಹಾಕು, ಸೇರಿಸು.
- (ಜನರು ಮೊದಲಾದವರನ್ನು) ಅನುಕೂಲವಾದ, ಅಚ್ಚುಕಟ್ಟಾದ — ಬಿಡಾರದಲ್ಲಿಳಿಸು.
- ಕೂಡಹಾಕು; ಕೂಡಿಡು; ಸಂಗ್ರಹಿಸು; ಜಮಾಯಿಸು.
ಅಕರ್ಮಕ ಕ್ರಿಯಾಪದ
- (ಜೇನುನೊಣಗಳು) ಗೂಡು – ಸೇರು, ಹೋಗು.
- (ಜೇನುನೊಣಗಳಂತೆ) ಒಟ್ಟಿಗೆ – ಇರು, ವಾಸಿಸು.
ಪದಗುಚ್ಛ
hive off:
- (ಜೇನುನೊಣಗಳಂತೆ) ಗುಂಪುಗಳಾಗಿ ಹೊರಡು, ಹೊರಟುಹೋಗು.
- (ರೂಪಕವಾಗಿ) (ಕೈಗಾರಿಕಾ ಸಂಸ್ಥೆಯ ವಿಷಯದಲ್ಲಿ) ಉಪಸಂಸ್ಥೆಗೆ ಕೆಲವು ಸರಕುಗಳನ್ನು ತಯಾರಿಸಲು – ಹಂಚಿಕೊಡು, ವಹಿಸು, ಗೊತ್ತುಮಾಡು.