See also 2hitch
1hitch ಹಿಚ್‍
ಸಕರ್ಮಕ ಕ್ರಿಯಾಪದ
  1. (ಕುಣಿಕೆ, ಕೊಂಡಿ, ಮೊದಲಾದವುಗಳಿಂದ) ಬಂಧಿಸು; ಬಿಗಿಮಾಡು; ಕಟ್ಟು; ಸಿಕ್ಕಿಸು: hitched the horse to the cart ಗಾಡಿಗೆ ಕುದುರೆಯನ್ನು ಕಟ್ಟಿದ.
  2. (ವಸ್ತುವನ್ನು) ಸರಕ್ಕನೆ ಕದಲಿಸು.
  3. ಸ್ವಲ್ಪ – ಸರಿಸು, ಸ್ಥಳಾಂತರಗೊಳಿಸು, ಜಾಗ ಬದಲಾಯಿಸು: hitched the pillow to a comfortable position ಆರಾಮವಾದ ಸ್ಥಾನಕ್ಕೆ ದಿಂಬನ್ನು ಸ್ವಲ್ಪ ಸರಿಸಿದ.
ಅಕರ್ಮಕ ಕ್ರಿಯಾಪದ
  1. (ಕುಣಿಕೆ, ಕೊಂಡಿ, ಮೊದಲಾದವುಗಳಿಂದ) ಬಂಧಿತವಾಗು, ಬಿಗಿಯಾಗು, ಸಿಕ್ಕಿಕೊ: the rod hitched into the bracket ಬ್ರ್ಯಾಕೆಟ್ಟಿನೊಳಗೆ ಬಂಧಿಸಿದ ಸರಳು.
  2. = 1hitchhike.
ಪದಗುಚ್ಛ

hitch up ಸರಕ್ಕನೆ ಎತ್ತು, ಮೇಲಕ್ಕೇರಿಸು.

ನುಡಿಗಟ್ಟು
  1. get hitched (ಆಡುಮಾತು) ಮದುವೆಯಾಗು; ಮದುವೆಗೆ ಸಿಕ್ಕಿಬೀಳು.
  2. hitch a ride (ಆಡುಮಾತು) ಬಿಟ್ಟಿ ಸವಾರಿ ಕೋರು; ಬಿಟ್ಟಿ ಪ್ರಯಾಣ ಕೋರು; ಬಿಟ್ಟಿ ಕೂರಿಸಿಕೊಂಡು, ಕರೆದುಕೊಂಡು ಹೋಗುವಂತೆ (ವಾಹನ) ಚಾಲಕನನ್ನು ಕೇಳು, ಕೋರು.
  3. hitch one’s wagon to a star ತನ್ನ ಅಧಿಕಾರವ್ಯಾಪ್ತಿಗಿಂತ ಹೆಚ್ಚಿನ ಅಧಿಕಾರವನ್ನು ಬಳಸಿಕೊ.
See also 1hitch
2hitch ಹಿಚ್‍
ನಾಮವಾಚಕ
  1. (ತಾತ್ಕಾಲಿಕ) ತಡೆ; ಅಡ್ಡಿ; ತೊಡಕು; ಅಡಚಣೆ: there was a hitch in the negotiations ಮಾತುಕತೆಗಳಲ್ಲಿ ಒಂದು ಅಡಚಣೆಯುಂಟಾಯಿತು.
  2. (ಹಠಾತ್‍ ಚಲನ:) ಸರಕ್ಕನೆ ಉಂಟಾದ ಚಲನ; ಇದ್ಕಕ್ಕಿದ್ದಂತೆ ಆದ ನೂಕಲು ಯಾ ಸೆಳೆತ.
  3. ಬಗೆಬಗೆಯ ಕುಣಿಕೆ, ಗಂಟು.
  4. (ಆಡುಮಾತು) ಬಿಟ್ಟಿ ಸವಾರಿ; ಬಿಟ್ಟಿ ಪ್ರಯಾಣ; ವಾಹನದಲ್ಲಿ ಪುಕ್ಕಟೆಯಾದ ಓಡಾಟ, ಪ್ರಯಾಣ.
  5. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಸೇವಾವಧಿ.
ಪದಗುಚ್ಛ

half hitch ಅರೆಕುಣಿಕೆ; ಹಗ್ಗದ ತುದಿಯನ್ನು ಅದರ ನಿಂತ ಭಾಗದ ಸುತ್ತ ಸುತ್ತಿ, ಆ ಸುತ್ತಿನೊಳಗಿಂದ ತುದಿಯನ್ನು ತೂರಿಸಿ ಹಾಕುವ ಗಂಟು.