See also 2hitch
1hitch ಹಿಚ್‍
ಸಕರ್ಮಕ ಕ್ರಿಯಾಪದ
  1. (ಕುಣಿಕೆ, ಕೊಂಡಿ, ಮೊದಲಾದವುಗಳಿಂದ) ಬಂಧಿಸು; ಬಿಗಿಮಾಡು; ಕಟ್ಟು; ಸಿಕ್ಕಿಸು: hitched the horse to the cart ಗಾಡಿಗೆ ಕುದುರೆಯನ್ನು ಕಟ್ಟಿದ.
  2. (ವಸ್ತುವನ್ನು) ಸರಕ್ಕನೆ ಕದಲಿಸು.
  3. ಸ್ವಲ್ಪ – ಸರಿಸು, ಸ್ಥಳಾಂತರಗೊಳಿಸು, ಜಾಗ ಬದಲಾಯಿಸು: hitched the pillow to a comfortable position ಆರಾಮವಾದ ಸ್ಥಾನಕ್ಕೆ ದಿಂಬನ್ನು ಸ್ವಲ್ಪ ಸರಿಸಿದ.
ಅಕರ್ಮಕ ಕ್ರಿಯಾಪದ
  1. (ಕುಣಿಕೆ, ಕೊಂಡಿ, ಮೊದಲಾದವುಗಳಿಂದ) ಬಂಧಿತವಾಗು, ಬಿಗಿಯಾಗು, ಸಿಕ್ಕಿಕೊ: the rod hitched into the bracket ಬ್ರ್ಯಾಕೆಟ್ಟಿನೊಳಗೆ ಬಂಧಿಸಿದ ಸರಳು.
  2. = 1hitchhike.
ಪದಗುಚ್ಛ

hitch up ಸರಕ್ಕನೆ ಎತ್ತು, ಮೇಲಕ್ಕೇರಿಸು.

ನುಡಿಗಟ್ಟು
  1. get hitched (ಆಡುಮಾತು) ಮದುವೆಯಾಗು; ಮದುವೆಗೆ ಸಿಕ್ಕಿಬೀಳು.
  2. hitch a ride (ಆಡುಮಾತು) ಬಿಟ್ಟಿ ಸವಾರಿ ಕೋರು; ಬಿಟ್ಟಿ ಪ್ರಯಾಣ ಕೋರು; ಬಿಟ್ಟಿ ಕೂರಿಸಿಕೊಂಡು, ಕರೆದುಕೊಂಡು ಹೋಗುವಂತೆ (ವಾಹನ) ಚಾಲಕನನ್ನು ಕೇಳು, ಕೋರು.
  3. hitch one’s wagon to a star ತನ್ನ ಅಧಿಕಾರವ್ಯಾಪ್ತಿಗಿಂತ ಹೆಚ್ಚಿನ ಅಧಿಕಾರವನ್ನು ಬಳಸಿಕೊ.