See also 2hire
1hire ಹೈಅರ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ಗೊತ್ತಾದ) ಬಾಡಿಗೆಗೆ (ಹಂಗಾಮಿ ಬಳಕೆಗಾಗಿ) ತೆಗೆದುಕೊ ಯಾ ಕೊಡು.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಒಬ್ಬನನ್ನು) ಕೂಲಿಗೆ, ಮಜೂರಿಗೆ ಗೊತ್ತುಮಾಡಿಕೊ.
  3. (ಅಮೆರಿಕನ್‍ ಪ್ರಯೋಗ) (ಹಣವನ್ನು) ಸಾಲ ತೆಗೆದುಕೊ.
ಪದಗುಚ್ಛ
  1. hired girl (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಜಮೀನಿನಲ್ಲಿ ಕೆಲಸ ಮಾಡುವ, ಮನೆಗೆಲಸದ) ಹೆಣ್ಣಾಳು.
  2. hired man (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಜಮೀನಿನಲ್ಲಿ ದುಡಿಯುವ) (ಮನೆಗೆಲಸದ) ಗಂಡಾಳು.
  3. hire out = 1hire(1).
See also 1hire
2hire ಹೈಅರ್‍
ನಾಮವಾಚಕ
  1. (ವಸ್ತುವನ್ನು) ಬಾಡಿಗೆಗೆ ಗೊತ್ತುಮಾಡಿಕೊಳ್ಳುವುದು ಯಾ ಕೊಡುವುದು.
  2. (ಆಳನ್ನು) ಮಜೂರಿಗೆ ಗೊತ್ತುಮಾಡಿಕೊಳ್ಳುವುದು.
  3. (ವಸ್ತುವಿನ ಬಳಕೆಗಾಗಿ ಕೊಡುವ) ಬಾಡಿಗೆ.
  4. (ಆಳನ್ನು ಸ್ವಂತಕೆಲಸಕ್ಕಾಗಿ ಬಳಸಿಕೊಳ್ಳಲು ಕೊಡುವ) ಕೂಲಿ; ಮಜೂರಿ.
  5. (ರೂಪಕವಾಗಿ) ಪ್ರತಿಹಲ; ವೇತನ: the labourer is worthy of his hire ಶ್ರಮಜೀವಿಯಾದವನು ಪ್ರತಿಹಲ ಪಡೆಯಲು ಅರ್ಹ.
ಪದಗುಚ್ಛ

for (or on) hire ಬಾಡಿಗೆಗೆ ಸಿಗುವ, ಬಾಡಿಗೆಗೆ — ಸಿದ್ಧವಾಗಿರುವ, ಕೊಡಲಿರುವ, ತಯಾರಾಗಿರುವ.