See also 2hip  3hip  4hip  5hip  6hip
1hip ಹಿಪ್‍
ನಾಮವಾಚಕ
  1. (ಮನುಷ್ಯರ, ಚತುಷ್ಪಾದಿಗಳ) ಸೊಂಟ; ಟೊಂಕ; ನಡು; ರೊಂಡಿ; ಚಪ್ಪೆ; ನಿತಂಬದ ಉಡಿ; ಕಟ್ಟಿ.
  2. (ಕೆಲವೊಮ್ಮೆ ಬಹುವಚನದಲ್ಲಿ) ನಿತಂಬದ ಬಳಿಯ ದೇಹದ ಸುತ್ತಳತೆ.
  3. (ವಾಸ್ತುಶಿಲ್ಪ) ಸೊಂಟ; ಕಟಿಭಾಗ; ಬೆಂಗಟ್ಟಿನಿಂದ ಯಾ ಕುಂಬೆಯಿಂದ ಸೂರಿನವರೆಗೂ ಇರುವ ಮೇಲ್ಚಾವಣಿಯಲ್ಲಿನ ಮೂಲೆ, ಏಣು.
ನುಡಿಗಟ್ಟು
  1. have (person) on the hip
    1. (ಕುಸ್ತಿ) ಸೊಂಟ ಹಿಡಿದೆತ್ತಿ ಎಸೆ
    2. (ಪ್ರಾಚೀನ ಪ್ರಯೋಗ) (ರೂಪಕವಾಗಿ) (ಒಬ್ಬನನ್ನು) ಹಿಡಿತದಲ್ಲಿ ಸಿಕ್ಕಿಸಿಕೊ; (ಒಬ್ಬನಿಗಿಂತ) ಮೇಲುಗೈಯಾಗು.
  2. smite hip and thigh ನಿರ್ದಾಕ್ಷಿಣ್ಯವಾಗಿ ಬಡಿದುಹಾಕು; ಮುಖಮೋರೆ ನೋಡದೆ ಸದೆಬಡಿ.
See also 1hip  3hip  4hip  5hip  6hip
2hip ಹಿಪ್‍
ನಾಮವಾಚಕ

(hep ಎಂದೂ ಪ್ರಯೋಗ) (ಮುಖ್ಯವಾಗಿ ಕಾಡು) ಗುಲಾಬಿಯ – ಕಾಯಿ, ಹಣ್ಣು, ಹಲ.

See also 1hip  2hip  4hip  5hip  6hip
3hip ಹಿಪ್‍
ಗುಣವಾಚಕ
( ತರರೂಪ hipper, ತಮರೂಪ hippest).

(hep ಎಂದೂ ಪ್ರಯೋಗ)(ಅಶಿಷ್ಟ)

  1. ಹ್ಯಾಷನ್ನಿನ; ಜ್ಯಾಸ್‍ ಸಂಗೀತ, ಉಡುಗೆ ತೊಡುಗೆಗಳು ಮೊದಲಾದವುಗಳಲ್ಲಿ ಇತ್ತೀಚಿನ ಹ್ಯಾಷನ್ನನ್ನು ಅನುಸರಿಸುವ.
  2. ಚೆನ್ನಾಗಿ ತಿಳಿದಿರುವ; ಬುದ್ಧಿವಂತನಾದ; ಬಲ್ಲವನಾದ.
See also 1hip  2hip  3hip  5hip  6hip
4hip ಹಿಪ್‍
ಭಾವಸೂಚಕ ಅವ್ಯಯ

ಹಿಪ್‍; ಜಯಘೋಷದ ಮೂರು ಪದಗಳಲ್ಲಿ ಮೊದಲ ಪದ: hip, hip hooray (or hurrah or hurray).

See also 1hip  2hip  3hip  4hip  6hip
5hip ಹಿಪ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಮಂಕುರೋಗ; ಮನೋವ್ಯಥೆಯ ರೋಗ; ವ್ಯಾಕುಲತಾ ವ್ಯಾಧಿ (hypochondria ಎಂಬುದರ ಸಂಕ್ಷಿಪ್ತ).

See also 1hip  2hip  3hip  4hip  5hip
6hip ಹಿಪ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಮಂಕುರೋಗ ಬರಿಸು; ವ್ಯಾಕುಲತಾ ವ್ಯಾಧಿಯನ್ನುಂಟುಮಾಡು.