See also 2hip  3hip  4hip  5hip  6hip
1hip ಹಿಪ್‍
ನಾಮವಾಚಕ
  1. (ಮನುಷ್ಯರ, ಚತುಷ್ಪಾದಿಗಳ) ಸೊಂಟ; ಟೊಂಕ; ನಡು; ರೊಂಡಿ; ಚಪ್ಪೆ; ನಿತಂಬದ ಉಡಿ; ಕಟ್ಟಿ.
  2. (ಕೆಲವೊಮ್ಮೆ ಬಹುವಚನದಲ್ಲಿ) ನಿತಂಬದ ಬಳಿಯ ದೇಹದ ಸುತ್ತಳತೆ.
  3. (ವಾಸ್ತುಶಿಲ್ಪ) ಸೊಂಟ; ಕಟಿಭಾಗ; ಬೆಂಗಟ್ಟಿನಿಂದ ಯಾ ಕುಂಬೆಯಿಂದ ಸೂರಿನವರೆಗೂ ಇರುವ ಮೇಲ್ಚಾವಣಿಯಲ್ಲಿನ ಮೂಲೆ, ಏಣು.
ನುಡಿಗಟ್ಟು
  1. have (person) on the hip
    1. (ಕುಸ್ತಿ) ಸೊಂಟ ಹಿಡಿದೆತ್ತಿ ಎಸೆ
    2. (ಪ್ರಾಚೀನ ಪ್ರಯೋಗ) (ರೂಪಕವಾಗಿ) (ಒಬ್ಬನನ್ನು) ಹಿಡಿತದಲ್ಲಿ ಸಿಕ್ಕಿಸಿಕೊ; (ಒಬ್ಬನಿಗಿಂತ) ಮೇಲುಗೈಯಾಗು.
  2. smite hip and thigh ನಿರ್ದಾಕ್ಷಿಣ್ಯವಾಗಿ ಬಡಿದುಹಾಕು; ಮುಖಮೋರೆ ನೋಡದೆ ಸದೆಬಡಿ.