See also 2hint
1hint ಹಿಂಟ್‍
ನಾಮವಾಚಕ
  1. ಸೂಕ್ಷ್ಮ ಸೂಚನೆ; ಸುಳಿವು: took the hint and left ಸುಳಿವು ಸಿಕ್ಕಿ ಕಂಬಿ ಕಿತ್ತ.
  2. ಪರೋಕ್ಷ ಸಲಹೆ; ಇಂಗಿತ; ಸಲಹೆಯೆಂದು ಕಾಣದಿರುವಂತೆ ಕೊಟ್ಟ ಸಲಹೆ: handy hints on cooking ಅಡುಗೆಯ ಬಗ್ಗೆ ಉಪಯುಕ್ತ ಸಲಹೆಗಳು.
  3. ಸುಳಿವು; ಮುಂದೆ ಬರುವುದರ ಮುನ್ಸೂಚನೆ: the beat of a tomtom rose without a hint ಏನೇನೂ ಮುನ್ಸೂಚನೆಯಿಲ್ಲದೆ ಡಂಗೂರದ ಶಬ್ದವೆದ್ದಿತು.
ಪದಗುಚ್ಛ
  1. hints for housewives (ಗ್ರಂಥದ ಯಾ ಲೇಖನದ ಶೀರ್ಷಿಕೆಯಾಗಿ) ಗೃಹಿಣಿಯರಿಗೆ (ಸಹಾಯಕವಾದ) ಸಲಹೆಗಳು, ಸೂಚನೆಗಳು.
  2. take a hint (ಕೂಡಲೇ) ಸೂಚನೆ ಗ್ರಹಿಸು; ಇಂಗಿತ ಅರಿ: I know how to take a hint ಕೂಡಲೇ ಸೂಚನೆ ಗ್ರಹಿಸಿ ಅದನ್ನು ನೆರವೇರಿಸುವುದು ನನಗೆ ಗೊತ್ತು.
See also 1hint
2hint ಹಿಂಟ್‍
ಸಕರ್ಮಕ ಕ್ರಿಯಾಪದ

ಸೂಕ್ಷ್ಮವಾಗಿ ಸೂಚಿಸು; ಸೂಕ್ಷ್ಮ ಸೂಚನೆ ಕೊಡು; ಪರೋಕ್ಷವಾಗಿ ತಿಳಿಸು: hinted the contrary ತದ್ವಿರುದ್ಧವಾದದ್ದನ್ನು ಸೂಕ್ಷ್ಮವಾಗಿ ಸೂಚಿಸಿದhinted that they were wrong ಅವರದು ತಪ್ಪು ಎಂದು ಪರೋಕ್ಷವಾಗಿ ತಿಳಿಸಿದ.

ಅಕರ್ಮಕ ಕ್ರಿಯಾಪದ

ಸೂಚನೆ, ಸುಳಿವು – ಕೊಡು; ಪರೋಕ್ಷವಾಗಿ ತಿಳಿಸು: he hinted at my folly ಅವನು ನನ್ನ ಅವಿವೇಕದ ಬಗ್ಗೆ ಪರೋಕ್ಷವಾಗಿ ಸೂಚಿಸಿದ.

ಪದಗುಚ್ಛ

hint at (ಯಾವುದೇ ಒಂದರ ಬಗ್ಗೆ) ಸುಳಿವು ಕೊಡು; ಪರೋಕ್ಷವಾಗಿ ಉಲ್ಲೇಖಿಸು.