See also 2hint
1hint ಹಿಂಟ್‍
ನಾಮವಾಚಕ
  1. ಸೂಕ್ಷ್ಮ ಸೂಚನೆ; ಸುಳಿವು: took the hint and left ಸುಳಿವು ಸಿಕ್ಕಿ ಕಂಬಿ ಕಿತ್ತ.
  2. ಪರೋಕ್ಷ ಸಲಹೆ; ಇಂಗಿತ; ಸಲಹೆಯೆಂದು ಕಾಣದಿರುವಂತೆ ಕೊಟ್ಟ ಸಲಹೆ: handy hints on cooking ಅಡುಗೆಯ ಬಗ್ಗೆ ಉಪಯುಕ್ತ ಸಲಹೆಗಳು.
  3. ಸುಳಿವು; ಮುಂದೆ ಬರುವುದರ ಮುನ್ಸೂಚನೆ: the beat of a tomtom rose without a hint ಏನೇನೂ ಮುನ್ಸೂಚನೆಯಿಲ್ಲದೆ ಡಂಗೂರದ ಶಬ್ದವೆದ್ದಿತು.
ಪದಗುಚ್ಛ
  1. hints for housewives (ಗ್ರಂಥದ ಯಾ ಲೇಖನದ ಶೀರ್ಷಿಕೆಯಾಗಿ) ಗೃಹಿಣಿಯರಿಗೆ (ಸಹಾಯಕವಾದ) ಸಲಹೆಗಳು, ಸೂಚನೆಗಳು.
  2. take a hint (ಕೂಡಲೇ) ಸೂಚನೆ ಗ್ರಹಿಸು; ಇಂಗಿತ ಅರಿ: I know how to take a hint ಕೂಡಲೇ ಸೂಚನೆ ಗ್ರಹಿಸಿ ಅದನ್ನು ನೆರವೇರಿಸುವುದು ನನಗೆ ಗೊತ್ತು.