See also 2hill
1hill ಹಿಲ್‍
ನಾಮವಾಚಕ
  1. ಗುಡ್ಡ; ಸಣ್ಣ ಬೆಟ್ಟ.
  2. (the hills ಎಂದೂ ಪ್ರಯೋಗ) (ಆಂಗ್ಲೋ ಇಂಡಿಯನ್‍) = hill station.
  3. (ಸಮಾಸಪದವಾಗಿ) ರಾಶಿ; ದಿಬ್ಬ; ದಿಣ್ಣೆ; ತಿಟ್ಟು; ಬೋರು; ಕುಪ್ಪೆ; ಗುಪ್ಪೆ; ಗುಡ್ಡೆ: ant hill ಹುತ್ತdung hill ಗೊಬ್ಬರದ ಕುಪ್ಪೆ, ರಾಶಿ; ತಿಪ್ಪೆ.
  4. ಓಟದ ರಸ್ತೆ; ಓಟ ಇರುವ, ಇಳಿಜಾರಿರುವ – ರಸ್ತೆ, ಹಾದಿ.
ಪದಗುಚ್ಛ
  1. hill and dale (ಗ್ರಾಮಹೋನ್‍ ತಟೆಯ ವಿಷಯದಲ್ಲಿ) ನಿಮ್ನೋಚ್ಚ; ಉಬ್ಬುತಗ್ಗಿನ; ಲಂಬತಲದ ಮೇಲೆ ಗಾಡಿಯ, ಗೆರೆಯ ಉಬ್ಬು ತಗ್ಗು ಜಾಡುಗಳಿರುವ.
  2. old as the hill ಬಹಳ ಪ್ರಾಚೀನ; ಬೆಟ್ಟಗಳಷ್ಟು ಹಳೆಯ; ಪರ್ವತಪ್ರಾಚೀನ.
  3. over the hill (ಅಮೆರಿಕನ್‍ ಪ್ರಯೋಗ, ಆಡುಮಾತು) ಪರಾಕಾಷ್ಠೆಯ ತರುವಾಯ; ಪರಮಾವಧಿಯ ಅನಂತರ; ಉಚ್ಛ್ರಾಯಾನಂತರ; ಪ್ರಭಾವದ, ಶಕ್ತಿಯ ಯಾ ತೀವ್ರತೆಯ ಶಿಖರ ತಲುಪಿದ ತರುವಾಯ; ಬೆಟ್ಟ ಹತ್ತಿದ ಯಾ ದಾಟಿದ ಮೇಲೆ.
  4. $^2$up hill and down dale.
See also 1hill
2hill ಹಿಲ್‍
ಸಕರ್ಮಕ ಕ್ರಿಯಾಪದ
  1. ಗುಡ್ಡೆಮಾಡು; ರಾಶಿಹಾಕು.
  2. (ಗಿಡಗಳಿಗೆ) ಮಣ್ಣು ಏರಹಾಕು.