See also 2hijack
1hijack ಹೈಜ್ಯಾಕ್‍
ಸಕರ್ಮಕ ಕ್ರಿಯಾಪದ
  1. (ವಾಹನ ನಿಯಂತ್ರಣವನ್ನು ಯಾ ಚಾಲನೆಯನ್ನು) ಅಪಹರಿಸು; ಬೆದರಿಕೆಯ ಮೂಲಕ (ಸಾಮಾನು ಸಾಗಿಸುತ್ತಿರುವ ಲಾರಿ, ಯಾನ ಮಾಡುತ್ತಿರುವ ವಿಮಾನ, ಮೊದಲಾದ ವಾಹನಗಳ) ನಿಯಂತ್ರಣ ಪಡೆದುಕೊ; ವಶ ತೆಗೆದುಕೊ; (ಅವುಗಳನ್ನು) ಹಿಡಿದುಕೊ, ವಶಪಡಿಸಿಕೊ.
  2. ಸಾಗಾವಣೆಯಲ್ಲಿರುವ ಸರಕುಗಳನ್ನು ಕದಿ, ಅಪಹರಿಸು.
  3. (ಈ ರೀತಿಯಲ್ಲಿ ವಿಮಾನ ಮೊದಲಾದವುಗಳನ್ನು) ಹೊಸ ಯಾ ಅವು ಉದ್ದೇಶಿಸಿರದಿದ್ದ ಸ್ಥಳಗಳಿಗೆ ಹೋಗುವಂತೆ ಬಲಾತ್ಕರಿಸು.
  4. ಬಲವಂತದಿಂದ ಯಾ ಕುತಂತ್ರದಿಂದ (ಸಂಸ್ಥೆ ಮೊದಲಾದವನ್ನು) ಅದರ ನಿಯಂತ್ರಣ ಪಡೆಯಲು ವಶಕ್ಕೆ ತೆಗೆದುಕೊ.
See also 1hijack
2hijack ಹೈಜ್ಯಾಕ್‍
ನಾಮವಾಚಕ

ಅಪಹರಣ:

  1. ಬಲಾತ್ಕಾರದಿಂದ ವಾಹನದ ಚಾಲನೆಯನ್ನು ವಶಪಡಿಸಿಕೊಳ್ಳುವುದು.
  2. ವಾಹನವನ್ನು ಹೊಸ ಸ್ಥಳಕ್ಕೆ ಹೋಗುವಂತೆ ಬಲಾತ್ಕರಿಸುವುದು.
  3. ವಾಹನಗಳಿಂದ ಸರಕುಗಳನ್ನು ಕದಿಯುವುದು.