See also 2hijack
1hijack ಹೈಜ್ಯಾಕ್‍
ಸಕರ್ಮಕ ಕ್ರಿಯಾಪದ
  1. (ವಾಹನ ನಿಯಂತ್ರಣವನ್ನು ಯಾ ಚಾಲನೆಯನ್ನು) ಅಪಹರಿಸು; ಬೆದರಿಕೆಯ ಮೂಲಕ (ಸಾಮಾನು ಸಾಗಿಸುತ್ತಿರುವ ಲಾರಿ, ಯಾನ ಮಾಡುತ್ತಿರುವ ವಿಮಾನ, ಮೊದಲಾದ ವಾಹನಗಳ) ನಿಯಂತ್ರಣ ಪಡೆದುಕೊ; ವಶ ತೆಗೆದುಕೊ; (ಅವುಗಳನ್ನು) ಹಿಡಿದುಕೊ, ವಶಪಡಿಸಿಕೊ.
  2. ಸಾಗಾವಣೆಯಲ್ಲಿರುವ ಸರಕುಗಳನ್ನು ಕದಿ, ಅಪಹರಿಸು.
  3. (ಈ ರೀತಿಯಲ್ಲಿ ವಿಮಾನ ಮೊದಲಾದವುಗಳನ್ನು) ಹೊಸ ಯಾ ಅವು ಉದ್ದೇಶಿಸಿರದಿದ್ದ ಸ್ಥಳಗಳಿಗೆ ಹೋಗುವಂತೆ ಬಲಾತ್ಕರಿಸು.
  4. ಬಲವಂತದಿಂದ ಯಾ ಕುತಂತ್ರದಿಂದ (ಸಂಸ್ಥೆ ಮೊದಲಾದವನ್ನು) ಅದರ ನಿಯಂತ್ರಣ ಪಡೆಯಲು ವಶಕ್ಕೆ ತೆಗೆದುಕೊ.