See also 2herd  3herd
1herd ಹರ್ಡ್‍
ನಾಮವಾಚಕ
  1. (ಒಟ್ಟಿಗೆ ಮೇಯುತ್ತಿರುವ ಯಾ ಸಂಚರಿಸುತ್ತಿರುವ ಯಾ ಒಟ್ಟಿಗೆ ಇಟ್ಟಿರುವ ಪ್ರಾಣಿಗಳ, ಮುಖ್ಯವಾಗಿ ದನಗಳ) ಮಂದೆ; ಹಿಂಡು.
  2. (ಹೀನಾರ್ಥಕ ಪ್ರಯೋಗ) ಜನಜಂಗುಳಿ; (ಜನಗಳ) ಸಂದಣಿ; ಪರಿಷೆ; ದೊಂಬಿ; ಗುಮ್ಮಿ; ಗೊಂಚಿ: the herd ಜನಜಂಗುಳಿ; ದೊಂಬಿ; ಜನದ ಪರಿಷೆthe common or vulgar herd ಸಾಮಾನ್ಯ ಜನತೆ; ಜನಸಾಮಾನ್ಯರು.
ಪದಗುಚ್ಛ

the herd instinct ಹಿಂಡು(ಗೂಡುವ) ಪ್ರತ್ತಿ; ಸಂಘಪ್ರತ್ತಿ; ಮಂದೆಸ್ವಭಾವ; (ಮನಶ್ಯಾಸ್ತ್ರದ ರೀತ್ಯಾ ಪರಿಣಾಮಕಾರಿಯಾದ) ಸಂಘಪ್ರೇಮ ಮತ್ತು ಪರಸ್ಪರ ಪ್ರಭಾವ.

ನುಡಿಗಟ್ಟು

ride herd on (ಅಮೆರಿಕನ್‍ ಪ್ರಯೋಗ) ಕಾವಲುಕಾಯು; ನೋಡಿಕೊ.

See also 1herd  3herd
2herd ಹರ್ಡ್‍
ನಾಮವಾಚಕ

(ಮುಖ್ಯವಾಗಿ ಸಮಾಸಗಳಲ್ಲಿ) (ದನ, ಕುರಿ ಮೊದಲಾದವುಗಳ) ಹಿಂಡುಕಾಯುವವ: cowherd ದನಗಾಹಿ; ದನ ಕಾಯುವವನುswine herd ಹಂದಿ ಕಾಯುವವನು.

See also 1herd  2herd
3herd ಹರ್ಡ್‍
ಸಕರ್ಮಕ ಕ್ರಿಯಾಪದ
  1. (ಕುರಿ, ದನಗಳನ್ನು) ಕಾಯು ಯಾ ಅಟ್ಟು:dogs are often trained to herd sheep ಕುರಿಗಳನ್ನು ಕಾಯಲು ಅನೇಕ ವೇಳೆ ನಾಯಿಗಳಿಗೆ ತಯಾರಿ ಕೊಡಲಾಗುವುದು.
  2. ಒಟ್ಟುಗೂಡಿಸು; ಗುಂಪು ಗೂಡಿಸು; ಒಂದುಗೂಡಿಸು: he herded everyone together to sing folk-songs ಜನಪದ ಗೀತೆಗಳನ್ನು ಹಾಡಲು ಅವನು ಎಲ್ಲರನ್ನೂ ಗುಂಪುಗೂಡಿಸಿದ.
  3. ಹಿಂಡಾಗಿ ಹೋಗುವಂತೆ ನಡೆಸು ಯಾ ಮಾಡು; ಗುಂಪಿನಲ್ಲಿ ಹೋಗುವಂತೆ ಒಯ್ಯು ಯಾ ಮಾಡು: the teacher herded the children into the classroom ಉಪಾಧ್ಯಾಯನು ಮಕ್ಕಳನ್ನು ತರಗತಿಯೊಳಕ್ಕೆ ಗುಂಪಾಗಿ ಒಯ್ದ ಯಾ ಹೋಗುವಂತೆ ಮಾಡಿದ.
ಅಕರ್ಮಕ ಕ್ರಿಯಾಪದ
  1. ಮಂದೆಯಾಗಿ, ಮಂದೆಗಟ್ಟಿಕೊಂಡು – ಹೋಗು; ಹಿಂಡಾಗಿ ಹೋಗು (ವ್ಯಕ್ತಿಗಳ ವಿಷಯದಲ್ಲಿರೂಪಕವಾಗಿ ಸಹ): when the bell rang they herded together ಗಂಟೆ ಬಾರಿಸಿದಾಗ ಅವರು ಹಿಂಡುಗಟ್ಟಿಕೊಂಡು ಒಟ್ಟಿಗೆ ಒಳಗೆ ಹೋದರು.
  2. ಮಂದೆಯಾಗು; ಹಿಂಡಾಗು; ಹಿಂಡುಗಟ್ಟು; ಹಿಂಡುಗೂಡು; ಗುಂಪಾಗು.